Latest

ಪ್ರಪ್ರಥಮ ಬಾರಿಗೆ ಬೆಳಗಾವಿಯಲ್ಲಿ ಕರ್ನಾಟಕ ಕುಸ್ತಿ ಹಬ್ಬ -ಪೂರ್ವಭಾವಿ ಸಭೆ

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯಲ್ಲಿ ಪ್ರಪ್ರಥಮ ಬಾರಿಗೆ ಐತಿಹಾಸಿಕ ಕರ್ನಾಟಕ ಕುಸ್ತಿ ಹಬ್ಬವನ್ನು ಫೆಬ್ರುವರಿ 8, 9, ಹಾಗೂ 10 ರಂದು ಸಂಘಟಿಸಲಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಬಸವರಾಜ ಹೆಚ್ ಅಧ್ಯಕ್ಷತೆಯಲ್ಲಿ ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು. ಕರ್ನಾಟಕ ಕುಸ್ತಿ ಹಬ್ಬ ಯಶಸ್ವಿ ಸಂಘಟನೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿಯ ಉಪ ನಿರ್ದೇಶಕ ಸೀಬಿರಂಗಯ್ಯ, ಅಂತರರಾಷ್ಟ್ರೀಯ ಕುಸ್ತಿಪಟು, ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಅಧ್ಯಕ್ಷ ರತನ್ ಮಠಪತಿ, ಮುಕುಂದ ಕಿಲ್ಲೇಕರ (ಅರ್ಜುನ ಪ್ರಶಸ್ತಿ ವಿಜೇತ ಬಾಕ್ಸಿಂಗ್ ಕ್ರೀಡಾಪಟು), ಎಂ.ಆರ್. ಪಾಟೀಲ (ಒಲಂಪಿಯನ್) ಮಾಜಿ ಕುಸ್ತಿಪಟು, ಶಿವಾಜಿ ಚಿಂಗಳೆ (ಕಾಮನವೆಲ್ತ್ ಮೆಡಲಿಸ್ಟ್), ಮಹೇಶ ಡುಕ್ರೆ (ಅಂತರರಾಷ್ಟ್ರ ಕುಸ್ತಿಪಟು), ಹೆಸರಾಂತ ಕಬಡ್ಡಿ ಕ್ರೀಡಾಪಟು ಹಾಗೂ ಗ್ರಾಮೀಣ ಎಸಿಪಿ ಬಾಲಚಂದ್ರ ಬಿ.ಎಸ್, ಮಾಜಿ ಕುಸ್ತಿಪಟು ಮಹಾಂತೇಶ್ ಜಿದ್ದಿ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಹಿರಿಯ ಕುಸ್ತಿ ತರಬೇತಿದಾರರಾದ ಶ್ರೀನಿವಾಸಗೌಡ, ಶಂಕರಪ್ಪ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಕುಸ್ತಿ ತರಬೇತಿದಾರರು ಸೇರಿದಂತೆ ವಿವಿಧ ಕುಸ್ತಿ ಸಂಘಟನೆ ಪಧಾಧಿಕಾರಿಗಳು, ಹಿರಿಯ ಕುಸ್ತಿಪಟುಗಳು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button