Latest

ಬಂಡಾಯಕ್ಕೆ ನಲ್ವತ್ತರ ಪ್ರಾಯ; ಮಾ. 9, 10 ರಂದು ಬೆಳಗಾವಿಯಲ್ಲಿ ಸಮಾವೇಶ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
 ” ಖಡ್ಗವಾಗಲಿ ಕಾವ್ಯ; ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ” ಎಂಬ ಧ್ಯೇಯ ವಾಕ್ಯದೊಂದಿಗೆ 1979 ರ ಮಾರ್ಚ 10 ರಂದು ಹುಟ್ಟಿಕೊಂಡ ಬಂಡಾಯ ಸಾಹಿತ್ಯ ಸಂಘಟನೆಗೆ ಈಗ ನಲ್ವತ್ತರ ಪ್ರಾಯ. ಈ ಸಂದರ್ಭದಲ್ಲಿ ಬರುವ ಮಾರ್ಚ 9 ಮತ್ತು 10 ರಂದು ಬೆಳಗಾವಿಯಲ್ಲಿ ” ಬಂಡಾಯ ಸಾಹಿತ್ಯ; ಸೈದ್ಧಾಂತಿಕ ಅನುಸಂಧಾನ” ಎಂಬ ಪರಿಕಲ್ಪನೆಯ ಎರಡು ದಿನಗಳ ಕಾರ್ಯಾಗಾರ ನಡೆಯಲಿದೆ.
 ಈ ಹಿನ್ನೆಲೆಯಲ್ಲಿ ಭಾನುವಾರ ಅಂಬೇಡ್ಕರ ಉದ್ಯಾನವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಸದಸ್ಯರ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾ ಸಂಚಾಲಕ ಪ್ರೊ.ವೈ.ಬಿ.ಹಿಮ್ಮಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಎರಡು ದಿನಗಳ ಕಾರ್ಯಾಗಾರದಲ್ಲಿ ಚರ್ಚಿಸಬೇಕಾದ ವಿಷಯಗಳ ಮತ್ತು ಭಾಗವಹಿಸುವ ಪ್ರತಿನಿಧಿಗಳ ವಸತಿ ಮತ್ತು ಊಟದ ವ್ಯವಸ್ಥೆಯ ಬಗ್ಗೆ ಚರ್ಚಿಸಿತು.
 ಖ್ಯಾತ ಬಂಡಾಯ ಸಾಹಿತಿಗಳಾದ ಪ್ರೊ.ಚಂದ್ರಶೇಖರ ಪಾಟೀಲ ಮತ್ತು ಪ್ರೊ.ಬರಗೂರು ರಾಮಚಂದ್ರಪ್ಪ ಸಹಿತ ನಾಡಿನ ಪ್ರಮುಖರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಾದ್ಯಂತದ 300 ಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆಯಿದೆ. ಬೆಳಗಾವಿಯ ರಾಮದೇವ ಹೊಟೆಲ್ ಹಿಂದಿರುವ ಬಾಳೇಕುಂದ್ರಿ ಇಂಜನಿಯರಿಂಗ್ ಇನ್ ಸ್ಟಿಟ್ಯೂಟ್ ಸಭಾಂಗಣದಲ್ಲಿ ಈ ಕಾರ್ಯಾಗಾರವನ್ನು ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಅಶೋಕ ಚಂದರಗಿ, ಶಂಕರ ಬಾಗೇವಾಡಿ, ಡಾ.ಚಂದ್ರು ತಳವಾರ, ಡಾ.ವಿಜಯ ನಾಗನೂರಿ, ಡಾ.ಮಹೇಶ ಗಾಜಪ್ಪನವರ, ಮಲ್ಲಿಕಾರ್ಜುನ ಲೋಕಳೆ, ಮಹೇಶ ಢಾಲೆ, ಪರಮಾನಂದ ಎಂಟಮಾನ್, ಬಿ.ಎನ್.ಕಸಾಳೆ, ಪ್ರೊ.ದೇಮಣ್ಣ ಸೊಗಲದ, ಪ್ರೊ.ಅಡಿವೆಪ್ಪ ಇಟಗಿ, ಕಾವೇರಿ ಬುಕ್ಯಾಳರ್, ಆನಂದ ಪಟಾತ್, ಗೌತಮ್ ಮಾಳಗೆ, ಬಾಲು ನಾಯಕ, ಶಂಕರ ಕೊಡತೆ, ಮಂಜುನಾಥ ಪಾಟೀಲ, ಸಂತೋಷ ನಾಯಕ್, ಈರಣ್ಣ ಮುದೆನ್ನವರ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button