ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಸಿಎಂ ಕುಮಾರಸ್ವಾಮಿ ಬಗ್ಗೆ ಪ್ರಧಾನಿ ನರೆಂದ್ರ ಮೋದಿ ನೀಡಿರುವ ಹೇಳಿಕೆ ಖಂಡನೀಯಿ. ಈ ದೇಶದ ಪ್ರಧಾನಿಗಳು ಇಷ್ಡೊಂದು ಕೆಳ ಮಟ್ಟದ ಹೇಳಿಕೆ ಕೊಟ್ಟು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದಾರೆ. ಹತಾಶ ಭಾವನೆಯಿಂದ ಈ ಹೇಳಿಕೆ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಕರ್ನಾಟಕ ಸರ್ಕಾರವನ್ನು ಅಸ್ತಿರಗೊಳಿಸಲು ಪ್ರಯತ್ನ ಪಟ್ರು. ಆದರೆ ಅದು ಆಗದೆ ಕೊನೆಗೆ ಸೋತು ಸುಣ್ಣವಾಗಿ ಇಂತ ಹೇಳಿಕೆ ಕೊಟ್ಟಿದ್ದಾರೆ. ಇದೀಗ ಕರ್ನಾಟಕದಿಂದಲೇ ನಮಗೆ ಸೋಲು ಆಗುತ್ತೆ ಎಂದು ಭಯಗೊಂಡಿದ್ದಾರೆ. ಅದಕ್ಕಾಗಿ ಸೋಲುವ ಭಯದಿಂದ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಕರ್ನಾಟಕದಿಂದಲೇ ಬದಲಾವಣೆ, ಪರಿವರ್ತನೆ ಯಾಗಲಿದೆ ಎಂಬುದು ಅವರಿಗೆ ತಿಳಿದಿದೆ. ಹಾಗಾಗಿ ಸಿಎಂ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಜನರು ಇದೆಲ್ಲವನ್ನೂ ನೋಡ್ತಿದ್ದಾರೆ. ಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ನವರು ತಮಗೆ ಒತ್ತಡ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಯಾವಾಗಲೂ ಹೇಳಿಲ್ಲ. ಅವರ ಪಕ್ಷದಲ್ಲಿ ಇರುವ ಒತ್ತಡದಿಂದ ಅವರು ಹಾಗೇ ಹೇಳಿರಬಹುದು ಅಷ್ಡೇ. ನಂತರ ಅವರು ಆ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನನ್ನ ಹೇಳಿಕೆ ಕಾಂಗ್ರೆಸ್ ನನಗೂ ಯಾವುದೇ ಸಂಬಂಧ ಇಲ್ಲ ಅಂತಾ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹಂಚಿಕೆಗಳ ಬಗ್ಗೆ ರಾಹುಲ್ ಗಾಂಧಿ, ದೇವೇಗೌಡ ಕುಳಿತು ಚರ್ಚಿಸಿ ತೀರ್ಮಾನ ಕೈಗೊಳ್ತಾರೆ. ಇದರ ಬಗ್ಗೆ ಯಾರೂ ಗೊಂದಲ ಪಡುವುದು ಅಗತ್ಯ ಇಲ್ಲ. ಎಲ್ಲ ಸುಸೂತ್ರವಾಗಿ ಎಲ್ಲರೂ ಒಪ್ಪುವಂತೆ ನಿರ್ಧಾರ ಆಗಲಿದೆ ಎಂದ ಅವರು, ದೇವೇಗೌಡ ಬೀದರ್ ಲೋಕಸಭಾ ಕ್ಷೇತ್ರ ಕೇಳಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಪ್ರಭಾವ, ವರ್ಚಸ್ಸು ಹೆಚ್ಚಿರುತ್ತೋ ಆ ಅಭ್ಯರ್ಥಿ ಸ್ವರ್ಧೆ ಮಾಡಬೇಕು. ನಮ್ಮ ಉದ್ದೇಶ ಬಿಜೆಪಿಯನ್ನು ಅಧಿಕಾರದಿಂದ ದೂರು ಇಡುವುದು. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಯಾರು ಸೋಲಿಸ್ತಾರೋ ಅವರಿಗೆ ಟಿಕೇಟ್ ಕೊಡುವ ಬಗ್ಗೆ ತೀರ್ಮಾನ ಆಗಿದೆ. ಬೀದರ್ ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರು ಇದ್ದಾರೆ. ಆ ದೃಷ್ಟಿಯಿಂದ ಅಲ್ಲಿ ಟಿಕೇಟ್ ಹಂಚಿಕೆ ಮಾಡಬೇಕಾಗುತ್ತೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಅಲ್ಲಿ ಸ್ವರ್ಧೆ ಮಾಡಬೇಕು ಎನ್ನುವ ಒಲವು ತೋರಿದರು ಖಂಡ್ರೆ.
ಸಂಕ್ರಾಂತಿ ನಂತರ ರಾಜ್ಯದಲ್ಲಿ ಕ್ರಾಂತಿ ವಿಚಾರದ ಬಗ್ಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಂಕ್ರಾಂತಿ ಹಬ್ಬದ ನಂತರ ಇತಿಹಾಸ ತಗೊಂಡ್ರೆ ಹೊಸ ವರ್ಷ ಬರುತ್ತೆ. ರೈತರಿಗೆ ಒಳ್ಳೆಯದಾಗುತ್ತೆ. ಒಳ್ಳೆಯದಕ್ಕಾಗಿ ಕ್ರಾಂತಿ ಆಗುತ್ತೆ. ಮೈತ್ರಿ ಸರ್ಕಾರ ಕೂಡ ಮತ್ತಷ್ಟು ಬಲಿಷ್ಠ ವಾಗುತ್ತೆ. ಈ ರಾಜ್ಯದ ಜನರಿಗೆ ಒಳ್ಳೆಯ ಆಡಳಿತ ಕೊಡಲಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ