ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆ ಅಡಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸರಿಕಟ್ಟಿ ಹಾಗೂ ಮಾಸ್ತಮರಡಿ ಗ್ರಾಮದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಲಾಯಿತು.
ಬಿಪಿಎಲ್ ಕಾರ್ಡ್ ಹೊಂದಿದ ಗ್ಯಾಸ್ ಸಂಪರ್ಕ ವಿಲ್ಲದ ಕುಟುಂಬಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ 8 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, ಅದರಲ್ಲಿ ಈಗಾಗಲೇ 6.5 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ಮಾಜಿ ಶಾಸಕ ಸಂಜಯ ಪಾಟೀಲ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ ವಿತರಿಸಿ ಮಾತನಾಡುತ್ತಾ, ಪ್ರಧಾನಮಂತ್ರಿ ನರೇಂದ್ರ ಮೋದಿ ಬಡವರಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದಾರೆ. ಅದರಲ್ಲಿ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಈ ಯೋಜನೆ ಅತ್ಯಂತ ಅನುಕೂಲಕರವಾಗಿದೆ. ಅಲ್ಲದೆ ಪ್ರಧಾನಿಯವರು ಇಂತಹ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಬಗ್ಗೆ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆನೀಡಿದರು.
ಗ್ರಾಮ ಪಂಚಾಯತ ಸದಸ್ಯರಾದ ಮಾರುತಿ ಕೊಂಡಸಕೊಪ್ಪ, ಸುನಿತಾ ಬಡಿಗೇರ, ಸಾಗರ ಶೇರೆಕರ, ವೀರಭದ್ರಯ್ಯಾ ಪೂಜಾರ, ವಿಕಾಸ ದೇಸಾಯಿ, ಮಾರುತಿ ಮಾಸ್ತಮರ್ಡಿ, ತಾನಾಜಿ ಚೌಗುಲೆ, ಗಜಾನನ ನಾಯಿಕ, ವಸಂತ ಪಾಟೀಲ, ಯಲ್ಲಪ್ಪಾ ಪಾಟೀಲ, ಇಂಡೇನ ಗ್ಯಾಸ್ ಅಧಿಕಾರಿಗಳಾದ ಎಮ್.ಎಸ್.ಜೋಷಿ, ಸುಖರಾಜ ಸಿಂಗ್, ಚೈತನ್ಯ ಕೃಷ್ಣಾ, ಗ್ಯಾಸ್ ವಿತರಕರಾದ ಸಾವಿತ್ರಿದೇವಿ ಕೋಲಕಾರ್ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ