Latest

ಮಾರಿಹಾಳ ಪೊಲೀಸರ ಹುಟ್ಟುಹಬ್ಬ ಆಚರಣೆಯೇ ಆದರ್ಶ!

ಪ್ರಗತಿವಾಹಿನಿ ಸುದ್ದಿ, ಮಾರಿಹಾಳ

Home add -Advt

ಸಾಮಾನ್ಯವಾಗಿ ಹುಟ್ಟು ಹಬ್ಬವನ್ನು ಒಂದಿಷ್ಟು ಹಣ ಖರ್ಚು ಮಾಡಿ ಮೋಜು ಮಸ್ತಿ, ಪಾರ್ಟಿ ಮಾಡಿ ಆಚರಿಸುವುದೇ ಹೆಚ್ಚು.

ಬೆಳಗಾವಿ ಜಿಲ್ಲೆಯ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಒಂದು ವಿಶಿಷ್ಟ ಸಂಪ್ರದಾಯ ಹಾಕಿಕೊಂಡಿದ್ದಾರೆ. ವಿಜಯ ಸಿನ್ನೂರ್ ಇಲ್ಲಿಯ ಇನ್ಸ್ಪೆಕ್ಟರ್ ಆಗಿ ಬಂದ ನಂತರ ಬರ್ತ್ ಡೇ ಪಾರ್ಟಿಗೆಲ್ಲ ಕಡಿವಾಣ ಹಾಕಿ, ಹೊಸ ಮಾದರಿಯಲ್ಲಿ ಆಚರಣೆಗೆ ನಾಂದಿ ಹಾಡಿದ್ದಾರೆ. 

ಠಾಣೆೆಯ ಯಾವುದೇ ಸಿಬ್ಬಂದಿ ಬರ್ತ್ ಡೇ ಆದರೂ ಠಾಣೆಯ ಆವರಣದಲ್ಲಿ ಒಂದು ಗಿಡ ನೆಟ್ಟು ಪೋಷಿಸಬೇಕು. ಹಾಗೆ ಮಾಡುವುದರಿಂದ ಗಿಡವೂ ಬೆಳೆಯುತ್ತದೆ. ತಮ್ಮ ಜನ್ಮ ದಿನದಂದು ನೆಟ್ಟ ಗಿಡದ ಮೇಲೆ ಸಿಬ್ಬಂದಿಗೆ ಪ್ರೀತಿಯೂ ಇರುತ್ತದೆ. ಹಾಗಾಗಿ ಅದನ್ನು ಬೆಳೆಸುವಲ್ಲಿ ಅವರು ವಿಶೇಷ ಆಸಕ್ತಿ ವಹಿಸುತ್ತಾರೆ. 

ಶನಿವಾರ ಠಾಣೆಯ ಸಿಬ್ಬಂದಿಗಳಾದ ಗೀತಾ ನಾಯಕ ಮತ್ತು ಮಲ್ಲಿಕಾರ್ಜುನ ಸುಲದಾಳ ಅವರ ಜನ್ಮ ದಿನವಿತ್ತು. ಹಾಗಾಗಿ ಠಾಣೆ ಆವರಣದಲ್ಲಿ 2 ಗಿಡಗಳನ್ನು ನೆಡಲಾಯಿತು. 

Related Articles

Back to top button