Latest

ವಿಟಿಯು ವಿಷಯದಲ್ಲಿ ಜನರ ಭಾವನೆಯೊಂದಿಗೆ ಆಟವಾಡಬೇಡಿ -ನಾಡಗೌಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜನೆ ಮಾಡುವ ಸರಕಾರದ ನಿರ್ಧಾರಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ರಾಜಕಾರಣಿ ಡಾ.ಎಂ.ಪಿ.ನಾಡಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈಗಲೂ ಪ್ರತಿಭಟಿಸದಿದ್ದರೆ ಬೆಳಗಾವಿಯನ್ನೇ ಎತ್ತಿಕೊಂಡು ಹೋದಾರು

ವಿಟಿಯು ಸ್ಥಾಪನೆ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಡಗೌಡ ಪ್ರಗತಿವಾಹಿನಿಯೊಂದಿಗೆ ಮಾತನಾಡಿ, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸಬೇಕೆನ್ನುವ ಉದ್ದೇಶದಿಂದಲೇ  ಬೆಳಗಾವಿಯಲ್ಲಿ ವಿಟಿಯು ಸ್ಥಾಪನೆ ಮಾಡಲಾಗಿತ್ತು. ಆದರೆ ಈಗ ಅದನ್ನು ವಿಭಜಿಸುವ ನಿರ್ಧಾರ ಸರಿಯಲ್ಲ. ಹಾಗೆ ಮಾಡುವುದಾದರೆ ಎಲ್ಲ ವಿಶ್ವವಿದ್ಯಾಲಯಗಳನ್ನೂ ವಿಭಜಿಸಲಿ. ಇದೊಂದನ್ನೇ ಏಕೆ  ಎಂದು ಪ್ರಶ್ನಿಸಿದರು.

ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಸರಕಾರ ನಿರ್ಧಾರ ತೆಗೆದುಕೊಳ್ಳಬೇಕು. ಭಾವನೆಗಳೊಂದಿಗೆ ಆಟವಾಡುವುದು ಸರಿಯಲ್ಲ ಎಂದೂ ಅವರು ಹೇಳಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button