ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಭವಿಷ್ಯವನ್ನು ಕಟ್ಟಿಕೊಳ್ಳಬೇಕು. ಸಕಾರಾತ್ಮಕವಾಗಿ ವಿಚಾರಮಾಡಿ ಶ್ರಮಿಸಿದಾಗ ಗುರಿ ತಲುಪಲು ಸಾಧ್ಯವೆಂದು ಪೊಲೀಸ್ ಅಧೀಕ್ಷಕ ಸಿ.ಎಚ್. ಸುಧೀರಕುಮಾರ ರೆಡ್ಡಿ ಹೇಳಿದರು.
ನಗರದ ಎಸ್.ಕೆ.ಇ. ಸಂಸ್ಥೆಯ ರಾಣಿ ಪಾರ್ವತಿ ದೇವಿ ಪದವಿ ಪೂರ್ವ ಮಹಾವಿದ್ಯಾಲಯ ವತಿಯಿಂದ ಬುಧವಾರ ಕೆ.ಎಂ.ಗಿರಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
೨೦೧೮-೧೯ ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಶಿವಾಜಿ ತಿಬಿಲೆ ಮತ್ತು ಅತ್ಯುತ್ತಮ ವಿದ್ಯಾರ್ಥಿನಿ ರಿಯಾ ನಾಡಕರ್ಣಿ ಎಂದು ಘೋಷಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಡಿ.ಬಿ. ಕಲಘಟಗಿ ಹಾಗೂ ಜಿ.ಎಂ. ಗಣಾಚಾರಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪಿ.ಎಂ. ಶಿವಳಕರ ವಹಿಸಿದ್ದರು.
ಪ್ರಾಚಾರ್ಯರ ಕೆ.ಬಿ.ಮೇಳೇದ ವಾರ್ಷಿಕ ವರದಿ ವಾಚನ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ದೇವೇಂದ್ರ ಕುಡಚಿ ವಾರ್ಷಿಕ ಕ್ರೀಡಾ ವರದಿ ವಾಚನ ಮಾಡಿದರು. ಸುಜಾತಾ ಬಿಜಾಪುರೆ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಗ್ಲಾಡಿಸ್ ಗೋನ್ಸಾಲ್ವಿಸ್, ಜಿಯಾನಾ ಜಾರ್ಜ್ ನಿರೂಪಿಸಿದರು. ಸರಸ್ವತಿ ಧರನಗುತ್ತಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ