ಪ್ರಗತಿವಾಹಿನಿ ಸುದ್ದಿ, ಮೂಡಲಗಿ
ಇಲ್ಲಿಯ ಸಿದ್ದ ಸಂಸ್ಥಾನ ಮಠದ 11ನೇಯ ಪೀಠಾಧಿಪತಿ ಶ್ರೀ ಕಲ್ಮೇಶ್ವರಭೋದ ಸ್ವಾಮೀಜಿಗಳ 115ನೇ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.
ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಶ್ರೀಗಳ ಅಶ್ವಾರೋಡ ಪುತ್ಥಳಿಗೆ ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಜಿಗಳು ಪೂಜೆ ಸಲ್ಲಿಸಿದರು. ನಂತರ ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಜಿಗಳು ತೇರದ ವಾಹನದಲ್ಲಿ ಅಳವಡಿಸಲಾದ ಭವ್ಯ ಕಲ್ಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೇರವಣಿಗೆಗೆ ಚಾಲನೆ ನೀಡಿದರು. ಮೇರವಣಿಗೆಯು ಕಲ್ಮೇಶ್ವರ ವೃತ್ತದಿಂದ ಕರೇಮ್ಮ ವೃತ್ತ, ಬಸವವೇಶ್ವರ ವೃತ್ತ ಸಂಗಪ್ಪ ವೃತ್ತದಿಂದ ಕೆಳಗಿನ ಮಠಕ್ಕೆ ಸಾಗಿ ಪುನಃ ಕಲ್ಮೇಶ್ವರ ವೃತ್ತದಕ್ಕೆ ಸಾಗಿತು, ನಂತರ ಭಕ್ತರಿಗೆ ಅನ್ನ ಪ್ರಸಾದದ ವವ್ಯಸ್ಥೆ ಕಲ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಹಣಮಂತ ಗುಡ್ಲಮನಿ, ಶಿವು ಸಣ್ಣಕಿ ಹಾಗೂ ಮಲ್ಲಪ್ಪ ಮದಗುಣಕಿ, ಈಶ್ವರ ಮುರಗೋಡ, ನಿಂಗಪ್ಪ ಪೀರೋಜಿ, ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ಸಮಿತಿ ಸದಸ್ಯರಾದ ಹಣಮಂತ ಸತರಡ್ಡಿ, ಅಣ್ಣಪ್ಪ ಅಕ್ಕನ್ನವರ, ಅಜ್ಜಪ್ಪ ಅಂಗಡಿ, ಶಿವಬಸು ಸುಣಧೋಳಿ, ಈರಣ್ಣ ಢವಳೇಶ್ವರ, ಶ್ರೀಕಾಂತ ಪತ್ತಾರ, ಸದಾಶಿವ ನಿಂಗನೂರ, ಚನ್ನಪ್ಪ ಬೆಳವಿ, ಮನೋಹರ ಸಣ್ಣಕ್ಕಿ ಮತ್ತಿತರರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ