ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಂಯಮ, ಸ್ಥಿರತೆ, ಮತ್ತು ಸಮರ್ಪಣಾಭಾವದ ಅಧ್ಯಯನ ಗೆಲುವಿಗೆ ದಾರಿಮಾಡಿಕೊಡುತ್ತದೆ. ನನ್ನ ಗೆಲುವಿಗೆ ನಾನೇ ಕಾರಣ ಎಂಬ ಅರಿವು ಮತ್ತು ವಿಚಾರ ಶಕ್ತಿಯಿಂದ ವಿದ್ಯಾರ್ಥಿಗಳು ಕಾರ್ಯಶೀಲರಾಗಿ ಜಯ ಸಾಧಿಸಬೇಕು. ಉದಾತ್ತ ಗುರಿಗಳೊಂದಿಗೆ ಯಶಸ್ಸಿನ ಮೆಟ್ಟಿಲುಗಳನ್ನೇರಿದಾಗ ಉತ್ತಮ ಸ್ಥಾನಮಾನಗಳನ್ನು ಗಳಿಸಿಕೊಳ್ಳಲು ಸಾಧ್ಯ ಎಂದು ಬೆಳಗಾವಿ ದಂಡು ಮಂಡಳಿ ಸಿಇಒ ದಿವ್ಯಾ ಶಿವರಾಮ ಹೇಳಿದರು.
ನಗರದ ಎಸ್‌ಕೆಇ ಸಂಸ್ಥೆಯ ಆರ್‌ಪಿಡಿ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕ್ರೀಡಾ ಸಾಧನೆಗೈದ ಕಾಲೇಜಿನ ಶ್ಯಾಮಲಾ ಬೆಳಗಾಂವಕರ್, ಅತುಲ್ ಶಿರೋಳೆ, ಪೂಜಾ ದಳವಿ, ಸ್ವಪ್ನಿಲ್ ಯಳವಿ, ದೀಪಿಕಾ ಭವಾನಿ, ವೆಂಕಟೇಶ ತಹಶೀಲ್ದಾರ ಅವರನ್ನು ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
೨೦೧೮-೧೯ ನೇ ಸಾಲಿನ ಕಾಲೇಜಿನ ಉತ್ತಮ ವಿದ್ಯಾರ್ಥಿಗಳಾಗಿ ಬಿ.ಎ. ವಿಭಾಗದಿಂದ ಮೃತ್ಯುಂಜಯ ಹೊಸಕೋಟಿ, ಪೂಜಾ ಪದ್ಮಣ್ಣವರ ಮತ್ತು ಬಿ.ಕಾಂ. ವಿಭಾಗದಿಂದ ಕುಮಾರ ಉದಗಟ್ಟಿ, ಅರ್ಪಿತಾ ಕದಂ ಮತ್ತು ಸರ್ವಾಗ್ರಣಿ ಪ್ರಶಸ್ತಿಯನ್ನು ಕೃಷ್ಣಕುಮಾರ ಜೋಶಿ ಪಡೆದುಕೊಂಡರು.
ಆರ್‌ಪಿಡಿ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷೆ ಬಿಂಬಾ ನಾಡಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಾಧನೆಯ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
ಆರಂಭದಲ್ಲಿ ಪೂಜಾ ಪಮ್ಮಾರ ಸ್ವಾಗತ ನೃತ್ಯ ಪ್ರದರ್ಶಿಸಿದರು. ಪ್ರಾಚಾರ್ಯೆ ಡಾ. ಎ.ಎ. ದೇಸಾಯಿ ಸ್ವಾಗತಿಸಿದರು. ವಿದ್ಯಾರ್ಥಿ ಸಮಿತಿಯ ಉಪಾಧ್ಯಕ್ಷ ಸಿ.ಎಂ. ಮುನ್ನೋಳಿ ಪರಿಚಯಿಸಿದರು. ಪಿ.ಬಿ. ಜೋಶಿ ಮತ್ತು ರಾಮಕೃಷ್ಣ ಎನ್. ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ಪಿಯರ್ ಕರ್ವಾಲೋ ವಂದಿಸಿದರು. ಪೂಜಾ ಪಾಟೀಲ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ