Latest

ಕಾನೂನು ಉಪನ್ಯಾಸ ಇಂದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಹುಬ್ಬಳ್ಳಿಯ ಕರ್ನಾಟಕ ಸ್ಟೇಟ್ ಲಾ ಯುನಿವರ್ಸಿಟಿ ಹಾಗೂ ನಗರದ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವತಿಯಿಂದ ಮಾ.೧ರಂದು ಬೆಳಗ್ಗೆ ೯ಕ್ಕೆ ಟಿಳಕವಾಡಿಯ ಕೆಎಲ್‌ಎಸ್ ಆವರಣದಲ್ಲಿರುವ ಕೆ.ಕೆ. ವೇಣುಗೋಪಾಲ ಸಭಾಂಗಣದಲ್ಲಿ ಕಾನೂನು ವಿಷಯ ಕುರಿತು ಉಪನ್ಯಾಸ ಆಯೋಜಿಸಲಾಗಿದೆ. ’ಅನ್ಯಾಯ ತಡೆಗಟ್ಟುವಿಕೆ : ಕಾನೂನು ಶಿಕ್ಷಣದಿಂದ ಸಾಮಾಜಿಕ ನ್ಯಾಯ’ ಕುರಿತು ಬೆಂಗಳೂರಿನ ಗಾರ್ಡನ್ ಸಿಟಿ ಯುನಿವರ್ಸಿಟಿ ವೈಸ್ ಚಾನ್ಸಲರ್ ಪ್ರೊ. ವಿ.ಬಿ. ಕುಟಿನ್ಹೊ ಉಪನ್ಯಾಸ ನೀಡಲಿದ್ದಾರೆ.

Home add -Advt

ಬೆಳಗಾವಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ವೇಲಾ ಡಿ.ಕೆ., ಹುಬ್ಬಳ್ಳಿ ಕರ್ನಾಟಕ ಸ್ಟೇಟ್ ಲಾ ಯನಿವರ್ಸಿಟಿ ವೈಸ್ ಚಾನ್ಸಲರ್ ಡಾ. ಪಿ. ಈಶ್ವರ ಭಟ್, ಕರ್ನಾಟಕ ಲಾ ಸೊಸೈಟಿಯ ಚೇರಮನ್ ಎಂ.ಆರ್. ಕುಲಕರ್ಣಿ, ಆರ್.ಎಲ್. ಲಾ ಕಾಲೇಜು ಆಡಳಿತ ಮಂಡಳಿ ಚೇರಮನ್ ಪ್ರಮೋದ ಕಥವಿ, ಡಾ. ಸಂಧ್ಯಾ ಎಚ್.ವಿ. ಮುಂತಾದವರು ಉಪಸ್ಥಿತರಿರಲಿದ್ದಾರೆ.

Related Articles

Back to top button