ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ ಚೌಕಿದಾರ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅಂತ್ಯ ಹಾಡಿದ್ದಾರೆ.
ಚುನಾವಣೆ ಪ್ರಚಾರದ ವೇಳೆ ಎಲ್ಲರೂ ತಮ್ಮ ಟ್ವೀಟರ್ ಖಾತೆಯಲ್ಲಿ ಚೌಕಿದಾರ್ ಎಂದು ಹಾಕಿಕೊಳ್ಳುವಂತೆ ಮೋದಿ ಕರೆ ನೀಡಿದ್ದರು. ಜೊತೆಗೆ ಎಲ್ಲ ಪ್ರಚಾರ ಸಭೆಗಳಲ್ಲಿ ನಾನೂ ಚೌಕಿದಾರ್ ಎಂದು ಕಾರ್ಯಕರ್ತರಿಂದ ಹೇಳಿಸುತ್ತಿದ್ದರು.
ಎಐಸಿಸಿ ಅಧ್ಯಕ್ಷ ರಾಹುಲ ಗಾಂಧಿ ಚೌಕಿದಾರ್ ಚೋರ್ ಹೈ ಎಂದು ಹೀಯಾಳಿಸಲು ಆರಂಭಿಸಿದ್ದರಿಂದ ಮೋದಿ ಈ ಅಭಿಯಾನ ಆರಂಭಿಸಿ, ಅದನ್ನೇ ಹೇಗೆ ಪ್ರಚಾರಕ್ಕೆ ಬಳಸಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದರು.
ಇದೀಗ ಈ ಅಭಿಯಾನವನ್ನು ಮುಕ್ತಾಯಗೊಳಿಸೋಣ, ಮತ್ತು ಚೌಕಿದಾರರಾಗಿಯೇ ಮುಂದುವರಿಯೋಣ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ