ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಜೈಷೆ ಮೊಹಮ್ಮದ್ ಸಂಘಟನೆಯ ಸಂಸ್ಥಾಪಕ, ಅಂತಾರಾಷ್ಟ್ರೀಯ ಭಯೋತ್ಪಾದಕ, ಭಾರತದ ಮೋಸ್ಟ್ ವಾಂಟೆಂಡ್ ಉಗ್ರ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎನ್ನುವ ದಟ್ಟ ವದಂತಿ ಇಂದು ಮಧ್ಯಾಹ್ನದಿಂದಲೇ ಹರಡಿದೆ.
ಸಾಮಾಜಿಕ ಮಾಧ್ಯಮಗಳು ಮತ್ತು ಕೆಲವು ಟಿವಿ ಚಾನೆಲ್ ಗಳು ಸಹ ಇಂತಹ ಸುದ್ದಿಯನ್ನು ಬಿತ್ತರಿಸಿವೆ.
ಆದರೆ ಪಾಕಿಸ್ತಾನ ಸರಕಾರವಾಗಲಿ, ಯಾವುದೇ ಗುಪ್ತಚರ ಸಂಘಟನೆಗಳಾಗಲಿ ವದಂತಿಯನ್ನು ಖಚಿತಪಡಿಸಿಲ್ಲ.
ಭಾರತ ನಡೆಸಿದ ಬಾಲಾಕೋಟ್ ದಾಳಿಯ ದಿನ ತೀವ್ರ ಗೊಯಗೊಂಡಿದ್ದ ಅಜರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಆತ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗಿದೆ. ಆದರೆ ಪಾಕಿಸ್ತಾನ ಆತನ ಸಾವನ್ನು ಖಚಿತಪಡಿಸಿಲ್ಲ. ಆತ ಕಿಡ್ನಿ ಸಮಸ್ಯೆಯಿಂದ ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕಿತ್ಸೆ ಮುಂದುವರಿದಿದೆ ಎಂದು ಪಾಕಿಸ್ತಾನದ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.
ಹಾಗಾಗಿ ಅಜರ್ ಸಾವಿನ ಬಗ್ಗೆ ಹಬ್ಬಿರುವ ವದಂತಿಗೆ ಯಾವುದೇ ಖಚಿತತೆ ಇನ್ನೂ ಸಿಕ್ಕಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ