Latest

ಡಾ. ಮಹಾಂತೇಶ ರಾಮಣ್ಣವರ್ ಗೆ ಶೇಷ್ಠ ವೈದ್ಯ ಸೇವಾ ಪ್ರಶಸ್ತಿ ಪ್ರಧಾನ

ಪ್ರಗತಿವಾಹಿನಿ ಸುದ್ದಿ, ಕಲಬುರ್ಗಿ

ಬೆಳಗಾವಿಯ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ಕಾರ್ಯದರ್ಶಿ ಹಾಗೂ ಕೆಎಲ್‌ಇ ಶ್ರೀ ಬಿ.ಎಮ್ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ, ದೇಹದಾನ ಜಾಗೃತಿಗಾಗಿ ಹೆತ್ತ ತಂದೆ ಮೃತ ದೇಹ ಛೇದಿಸಿ ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಿ ವೈದ್ಯಕೀಯ ಇತಿಹಾಸ ನಿರ್ಮಿಸಿದ ಡಾ. ಮಹಾಂತೇಶ ರಾಮಣ್ಣವರ ಅವರಿಗೆ ಡಾ.ಎಸ್.ಎಸ್.ಸಿದ್ದಾರೆಡ್ಡಿ ಶೇಷ್ಠ ವೈದ್ಯ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ ಕಲಬುರಗಿ, ಕರ್ನಾಟಕ ರಾಜ್ಯ ಸರಕಾರಿ ಫಾರ್ಮಾಸಿಸ್ಟ್ ಸಂಘ ಬೆಂಗಳೂರು, ಡಾ. ಎಸ್ ಎಸ್ ಸಿದ್ದಾರೆಡ್ಡಿ ಪೌಂಡೇಷನ್(ರಿ), ಕಲಬುರಗಿ ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತನ ೨೦ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕಲಬುರಗಿ ಕನ್ನಡ ಭವನ ಸುವರ್ಣ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button