ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಉಡಾನ್ 3ರ ಅಡಿಯಲ್ಲಿ ಬಂದಿರುವ ಬೆಳಗಾವಿಗೆ ವಿಮಾನ ಸೇವೆ ಮತ್ತು ಸಂಬಂಧಿಸಿದ ಇತರ ಸೇವೆಗಳನ್ನು ತ್ವರಿತವಾಗಿ ಆರಂಭಿಸುವಂತೆ ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ ಸಿನ್ಹಾ ಅವರಿಗೆ ಬೆಳಗಾವಿ ಲೋಕಸಭಾ ಸದಸ್ಯ ಸುರೇಶ ಅಂಗಡಿ ಮನವಿ ಮಾಡಿದ್ದಾರೆ.
ಈ ಸಂಬಂಧ ಸೋಮವಾರ ಸಚಿವರಿಗೆ ನವದೆಹಲಿಯಲ್ಲಿ ಅಂಗಡಿ ಮನವಿ ಸಲ್ಲಿಸಿದ್ದಾರೆ. ಉಡಾನ್ 3ರ ಅಡಿಯಲ್ಲಿ ವಿಮಾನಗಳನ್ನು ಆದಷ್ಟು ಬೇಗ ಆರಂಭಿಸಬೇಕು. ಫ್ಲೈಯಿಂಗ್ ಸ್ಕೂಲ್ ಆರಂಭಿಸಬೇಕು. ಬೆಳಗಾವಿಯಿಂದ ಕಾರ್ಗೋ ವಿಮಾನ ಸೇವೆ ಶುರು ಮಾಡಬೇಕು ಎಂದು ಸುರೇಶ ಅಂಗಡಿ ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ