Latest

ಪತಿ ಪುರುಷನಲ್ಲ ಎಂದು ಎಂಟು ವರ್ಷಗಳ ನಂತರ ಕಂಡುಕೊಂಡ ಮಹಿಳೆ; ನ್ಯಾಯಕ್ಕಾಗಿ ಪೊಲೀಸರ ಮೊರೆ

ಪ್ರಗತಿವಾಹಿನಿ ಸುದ್ದಿ, ವಡೋದರಾ: ತನ್ನ ಪತಿ ಪುರುಷನಲ್ಲ ಎಂದು ಮದುವೆಯಾದ ಎಂಟು ವರ್ಷಗಳ ನಂತರ ಅರಿತ ಮಹಿಳೆಯೊಬ್ಬರು ಪೊಲೀಸರ ಮೊರೆ ಹೋಗಿದ್ದಾರೆ.

2014ರ ಫೆಬ್ರವರಿಯಲ್ಲಿ ಈ ಮಹಿಳೆ ಮೆಟ್ರಿಮೋನಿಯಲ್ ಸೈಟ್ ಮೂಲಕ ಸಂಪರ್ಕಿಸಿ ಈತನನ್ನು ಮದುವೆಯಾಗಿದ್ದರು. ಹನಿಮೂನ್ ಗಾಗಿ ಕಾಶ್ಮೀರಕ್ಕೆ ಹೋದಾಗ ವ್ಯಕ್ತಿ ಆಕೆಯ ಎಲ್ಲ ಬೇಡಿಕೆಗಳಿಗೂ ನಿರಾಕರಿಸಿದ್ದ. ಹಲವಾರು ಬಾರಿ ಮನ್ನಿಸುವ ಪ್ರಯತ್ನಗಳಿಗೂ ಆತ ಸ್ಪಂದಿಸಿರಲಿಲ್ಲ ಎಂದು ಮಹಿಳೆ ವಡೋದರಾದ ಗೋತ್ರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

Home add -Advt

ತನ್ನ ಪತಿ ಅಸ್ವಾಭಾವಿಕ ಲೈಂಗಿಕತೆಯ ಗುಣ ಹೊಂದಿದ್ದು 2020ರಲ್ಲಿ ಕೋಲ್ಕೊತ್ತಾಕ್ಕೆ ಹೋಗಿ ಸಣ್ಣ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವ ನೆಪದಲ್ಲಿ ಲಿಂಗ ಬದಲಾವಣೆ ಚಿಕಿತ್ಸೆಗೆ ಒಳಗಾಗಿ ಬಂದಿದ್ದಾಗಿಯೂ ಮಹಿಳೆ ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆ ರಷ್ಯಾದಲ್ಲಿ ಸಂಭವಿಸಿದ ಆಪಘಾತವೊಂದಕ್ಕೆ ಈಡಾದ ನಂತರ ತಾನು ಲೈಂಗಿಕವಾಗಿ ಅಸಮರ್ಥನಾಗಿದ್ದಾಗಿ ಪತಿ ಪೊಲೀಸರೆದುರು ಹೇಳಿಕೊಂಡಿದ್ದಾನೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿ ಜಿಲ್ಲಾ ಪೊಲೀಸ್ ಈಗ ಜನರಿಗೆ ಇನ್ನಷ್ಟು ಹತ್ತಿರ

 

Related Articles

Back to top button