ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಸಾಧಿಸಿ ತೋರಲು ಛಲ ಬೇಕು. ಯಾವ ಕ್ಷೇತ್ರದಲ್ಲಿ ಆಸಕ್ತಿ ವಹಿಸುವಿರಿ ಅದರ ಬಗ್ಗೆ ಆಳವಾದ ಅಧ್ಯಯನ ಮಾಡಬೇಕು ಹಾಗೂ ನಿರಂತರ ಪರಿಶ್ರಮ ಪಟ್ಟರೆ ನೀವೆಲ್ಲ ಭಾವಿ ವಿಜ್ಞಾನಿಗಳಾಗುತ್ತೀರಿ ಎಂದು ಡಯಟ್ ಪ್ರಾಚಾರ್ಯ ಜಿ. ಬಿ. ಮಣ್ಣಿಕೇರಿ ಅಭಿಪ್ರಾಯಪಟ್ಟರು.
ಅವರು ಬುಧವಾರ ಬೆಳಗಾವಿಯ ಡಾ. ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ಭಾರತ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಭವ್ಯ ಭಾರತದ ವಿಜ್ಞಾನಿಯಾಗಲು ಈಗಿನಿಂದಲೇ ಪ್ರಯತ್ನ ಮಾಡಬೇಕಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಸೋಸಿಯೇಷನ್ ಪಾರ್ ಸೈನ್ಸ್ ಎಜ್ಯುಕೇಶನ್ ಸಂಸ್ಥೆಯ ಕಾರ್ಯದರ್ಶಿ ರಾಜನಂದ ಗಾರ್ಘಿ ಮಾತನಾಡಿ, ಇಂದಿನ ಮಕ್ಕಳು ತಮ್ಮ ಪೂರ್ವಜರಿಗಿಂತ ಚುರುಕುತನವನ್ನು ಹೊಂದಿದ್ದಾರೆ. ಪ್ರತಿಯೊಬ್ಬರೂ ಹೊಸತನವನ್ನು ಕಲಿಯಬೇಕು ಎಂದರು.
ಕರಾಮಾನಿ ಮಂಡಳಿ ವೈಜ್ಞಾನಿಕ ಅಧಿಕಾರಿ ಡಾ. ಜಿ .ಎಂ. ಪಾಟೀಲ, ಶಿಕ್ಷಕ ಎಸ್. ಸಿ. ಹಿರೇಮಠ, ಜಿಲ್ಲಾ ಸಂಯೋಜಕ ಆರ್ ವಾಯ್ ಮುದ್ದವಗೋಳ, ಸಹಸಂಯೋಜಕ ವಾಯ್. ಬಿ. ಸನದಿ, ಚಿಕ್ಕೋಡಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಿ. ಬಿ. ನೇಸರಗಿ, ಶಿವಾನಂದ ಕಡಕೋಳ ಹಾಗೂ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲೆಯಿಂದ ಸಂಪಗಾಂವ ಆರ್. ಇ. ಎಸ್. ಪ್ರೌಢಶಾಲೆಯ ಪ್ರಿಯಾಂಕಾ ಹುಣಶೀಕಟ್ಟಿ, ಲಲಿತಾ ಜುಟ್ಟನವರ, ಲಕ್ಷ್ಮಿ ಪಾಟೀಲ, ಉಮಾ ಸುತಾರ, ಗೋಕಾಕ ಪಾಲ್ಸನ ಪೋರ್ಬ್ಸ ಅಕಾಡೆಮಿಯ ಐಶ್ವರ್ಯ ವಣ್ಣೂರ, ವಾಗ್ದೇವಿ ಕುಲಕರ್ಣಿ, ಅಬೂಬಕರ ಮತ್ತೆ, ಮೋಹಿನಖಾನ್ ಇಮಾನದಾರ, ಸವದತ್ತಿಯ ವೀರರಾಣಿ ಕಿತ್ತೂರ ಚನ್ನಮ್ಮ ಕಿರಿಯ ಪ್ರಾಥಮಿಕ ಶಾಲೆಯಿಂದ ರೂಪಾ ಭಜಂತ್ರಿ, ನಿತೀಶ್ ಶಿಂಧೆ, ಎಸ್. ಎಸ್. ಪ್ರೌಢಶಾಲೆಯ ನಿಧಿ ರಾಮಗೋನಟ್ಟಿ, ಶ್ರೀಗೌರಿ ಕಲ್ಮಠ, ಬೆಲ್ಲದಬಾಗೇವಾಡಿಯ ಭಾರತೇಶ ವಿದ್ಯಾಲಯದ ಶೃತಿ ಮುನ್ನೊಳ್ಳಿ, ಅಬ್ದುಲ್ ನಧಾಫ್, ಶೇಡಬಾಳ ಎ.ಎಸ್.ಪಿ.ವಿ.ಎಮ್. ಶಾಲೆಯ ಸೃಜನ್ ಮುಕುಂದ, ಆದಿತ್ಯ ನಂದಾಣೆ, ಗೋಕಾಕ ಶಂಕರಲಿಂಗ್ ಪ್ರೌಢಶಾಲೆಯ ರೇಣುಕಾ ಕೋಸಾಂದಲ ಹಾಗೂ ಪೂರ್ಣಮಾ ಗುಣಕಿ ಸೇರಿದಂತೆ ೧೦ ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ