Latest

ಬೆಳಗಾವಿ ಪಾಲಿಕೆ ಎಂಜಿನಿಯರ್ ಆರ್.ಎಸ್.ನಾಯಕ ನಿವೃತ್ತಿ, ಬೀಳ್ಕೊಡುಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಮಹಾನಗರ ಪಾಲಿಕೆ ಎಂಜಿನಿಯರ್ ಆಗಿ 37 ವರ್ಷ ಕೆಲಸ ಮಾಡಿದ ಆರ್.ಎಸ್.ನಾಯಕ ಶನಿವಾರ ನಿವೃತ್ತರಾದರು. 

ಬ್ರಿಟೀಶ್ ಬಾವಿಗಳಿಗೆ ಕಾಯಕಲ್ಪ, ಸ್ಮಾರ್ಟಿಸಿಟಿ ಯೋಜನೆ ಪ್ರಸ್ತಾವನೆ ತಯಾರಿ ಸೇರಿದಂತೆ ಅನೇಕ ವಿಷಯಗಳಲ್ಲಿ ಸಾಧನೆ ಮಾಡಿದ್ದ, ಬೆಳಗಾವಿ ಪಾಲಿಕೆಗೆ ಹಲವು ರಾಷ್ಟ್ರೀಯ ಪ್ರಶಸ್ತಿ ಬರುವುದಕ್ಕೆ ಕಾರಣರಾಗಿದ್ದ ನಾಯಕ್ ಅವರು ನಗರದ ಮೂಲೆ ಮೂಲೆಯನ್ನೂ ಅಧ್ಯಯನ ಮಾಡಿದ್ದರು. 

ಶನಿವಾರ ಸಂಜೆ ಪಾಲಿಕೆ ಸಭಾಭವನದಲ್ಲಿ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ಪಾಲಿಕೆಯ ಆಯುಕ್ತ ಇಬ್ರಾಹಿಂ ಮೈಗೂರ, ಹಿಂದಿನ ಆಯುಕ್ತ ಶಶಿಧರ ಕುರೇರ, ಶಶಿಧರ ನಾಗೌಡ, ಪಾಲಿಕೆಯ ಮಾಜಿ ಸದಸ್ಯರು, ಅಧಿಕಾರಿಗಳು ಇದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button