ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಸುಳ್ಳು ಆಶ್ವಾಸನೆಗಳನ್ನು ನೀಡಿ ವಚನ ಭ್ರಷ್ಠರಾದ ಮೋದಿ ದೇಶದ ಬಡ, ಮಧ್ಯಮ ವರ್ಗದ ಜನತೆಗೆ ಮೋಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಚುನಾವಣಾ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಹೇಳಿದರು.
ಅವರು ಸ್ಥಳಿಯ ಬಸವರಂಗ ಮಂಟಪದಲ್ಲಿ ಬೆಳಗಾವಿ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ವ್ಹಿ.ಎಸ್. ಸಾಧುನವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಹೊರ ದೇಶಗಳಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ’ಜನಧನ’ ಬ್ಯಾಂಕ್ ಖಾತೆಗೆ ೧೫ಲಕ್ಷ ರೂ ಹಾಕುವುದಾಗಿ ಮತ್ತು ಪ್ರತಿ ವರ್ಷ ೨ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಿ ನಿರುದ್ಯೋಗ ನಿವಾರಣೆ ಮಾಡುವುದಾಗಿ ಹೇಳಿದ ಮೋದಿಯವರ ಅಶ್ವಾಸನೆಗಳು ಬಿ.ಜೆ.ಪಿ. ಮತ್ತು ಎನ್.ಡಿ.ಎ ಹಾಗು ಸ್ವತಹ ಮೋದಿಯವರಿಗೆ ನೆನಪಿಲ್ಲ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಸೈನಿಕರು ದೇಶ, ಗಡಿ ಕಾಯುತ್ತಿದ್ದಾರೆ. ಕಾಂಗ್ರೇಸ್ ಪಕ್ಷ ಎಂದೂ ಸೈನಿಕರ ಕರ್ತವ್ಯವನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಆದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ದೇಶದ ಸೈನಿಕರನ್ನು ’ಮೋದಿ ಸೇನೆ’ ಎಂದು ಹೇಳಿ ಸೈನಿಕರನ್ನೂ ಸಹ ರಾಜಕೀಯಕ್ಕೆ ಎಳೆದು ಅವಮಾನಿಸಿದ್ದಾರೆ. ರಾಜ್ಯಪಾಲ ಕಲ್ಯಾಣ ಸಿಂಗ್ ತಮ್ಮ ಕರ್ತವ್ಯ ಮರೆತು ಮೋದಿಗೆ ಮತ ಹಾಕಲು ಹೇಳುತ್ತಿರುವುದು ಬಿ.ಜೆ.ಪಿ. ಅವನತಿಗೆ ದಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಅಭ್ಯರ್ಥಿ ಸಾಧುನವರ ಮಾತನಾಡಿದರು. ಅರವಿಂದ ದಳವಾಯಿ, ಕಾಂಗ್ರೇಸ್ ಮುಖಂಡ ಮಾಜಿ ಜಿ.ಪಂ.ಸದಸ್ಯ ರಮೇಶ ಉಟಗಿ, ಜಿಲ್ಲಾ ಕಾಂಗ್ರೇಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ ಪಕ್ಷದ ಸಾಧನೆಗಳನ್ನು ಹೇಳಿದರು.
ಜಿಲ್ಲಾ ಜೆ.ಡಿ.ಎಸ್.ಉಪಾಧ್ಯಕ್ಷ ಪ್ರಕಾಶ ಸೋನವಾಲ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಎಸ್.ಆರ್.ಸೋನವಾಲ್ಕರ,ಕಲ್ಲಪ್ಪ ಲಕ್ಕರ,ಭರಮಣ್ಣಾ ಉಪ್ಪಾರ, ವಿಜಯ್ ಸೋನವಾಲ್ಕರ,ಸುಭಾಸ ಪೂಜೇರಿ,ಗುರುರಾಜ ಪೂಜೇರಿ,ಜಯಶ್ರೀ ಮಾಳಗಿ,ನೀಲವ್ವ ಬೆಣ್ಣಿ, ಬಿ.ಬಿ.ಗೋರೋಶಿ, ರಾಜಾ ಸಲೀಂ ಕಾಶಿಮನವರ, ಗಣಪತಿ ತುಪಳಿ, ಬಸವರಾಜ ತೇಗಾವಿ, ಶಂಕರ ಗೋಟೂರ, ನಜೀರ ನದಾಫ ಇನ್ನಿತರರು ಇದ್ದರು.
ಜೆ.ಡಿ.ಎಸ್. ಅರಬಾಂವಿ ಬ್ಲಾಕ್ ಅಧ್ಯಕ್ಷ ಚನ್ನಪ್ಪ ವಗ್ಗನ್ನವರ ಸ್ವಾಗತಿಸಿದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ