Latest

ವಾಘಾ ಗಡಿ ತಲುಪಿದ ವಿಂಗ್ ಕಮಾಂಡರ್ ಅಭಿನಂದನ್

ಪ್ರಗತಿವಾಹಿನಿ ಸುದ್ದಿ, ನವದೆಹಲಿ

3 ದಿನಗಳ ಹಿಂದೆ ಪಾಕಿಸ್ತಾನದ ವಶಕ್ಕೆ ಸಿಕ್ಕಿ ಬಿದ್ದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್  ವಾಘಾ ಗಡಿಗೆ ತಲುಪಿದ್ದಾರೆ.

ಪಾಕಿಸ್ತಾನದ ಅಧಿಕಾರಿಗಳು ಅಭಿನಂದನ್ ಅವರನ್ನು ಗಡಿವರೆಗೂ ಕರೆತಂದಿದ್ದು, ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಆರೋಗ್ಯ ತಪಾಸಣೆ, ಮತ್ತಿತರ ವಿಚಾರಣೆ ಪ್ರಕ್ರಿಯೆ ನಡೆಯುತ್ತಿದ್ದು, ತದನಂತರ ಅಧಿಕೃತವಾಗಿ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ನಂತರ ಅಮೃತಸರಕ್ಕೆ ಕರೆದುಕೊಂಡು ಬಂದು ಅಲ್ಲಿಂದ ವಿಮಾನದ ಮೂಲ ಅಭಿನಂದನ್ ಅವರನ್ನು ನವದೆಹಲಿಗೆ ಕರೆದೊಯ್ಯಲಾಗುತ್ತದೆ.

ಅಭಿನಂದನ್ ಸ್ವಾಗತಕ್ಕೆ ಅವರ ಪೋಷಕರು, ಸಹಸ್ರಾರು ನಾಗರಿಕರು, ಅಧಿಕಾರಿಗಳು ವಾಘಾ ಗಡಿಯಲ್ಲಿ ನೆರೆದಿದ್ದಾರೆ. ಅಭಿನಂದನ್ ಅವರನ್ನು ಭಾರತೀಯ ಸೇನೆ ತಿಂಗಳುಗಟ್ಟಲೆ ವಿಚಾರಣೆಗೊಳಪಡಿಸುತ್ತದೆ. ಅಲ್ಲದೆ, ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ನಿಗಾ ಇಡಲಾಗುತ್ತದೆ. ಇದಾದ ನಂತರ ಅವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button