Latest

ಸುರೇಶ ಅಂಗಡಿ ಪಕ್ಷದ ಶಿಸ್ತಿನ ಸಿಪಾಯಿ -ಸಚಿವ ಹರ್ಷವರ್ಧನ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸುರೇಶ ಅಂಗಡಿ ಪಕ್ಷದ ಶಿಸ್ತಿನ ಸಿಪಾಯಿ. ಉತ್ತಮ ಕೆಲಸಗಾರ. ಕ್ಷೇತ್ರಕ್ಕಾಗಿ, ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹರ್ಷವರ್ಧನ್ ಪ್ರಶಂಸಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೊಮ್ಮೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತೆ 5 ವರ್ಷ ಉತ್ತಮ ಆಡಳಿತ ನೀಡಲಿದೆ ಎಂದರು.

Home add -Advt

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವು ಕೇವ ಊಹಾಪೋಹ ಎಂದ ಅವರು, ಬಿಜೆಪಿ ವಿರುದ್ಧದ ಕಾಂಗ್ರೆಸ್ ಡೈರಿ ಬೋಗಸ್ ಎನ್ನುವುದು ಸಾಬೀತಾಗಿದೆ. ಹಾಗಾಗಿ ಅದರ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವುದಿಲ್ಲ ಎಂದರು.

ನಾರ್ವೇಕರ್ ಗಲ್ಲಿಯಲ್ಲಿ ಬಿಜೆಪಿ ಚುನಾವಣೆ ಪ್ರಚಾರ ಕಾರ್ಯಾಲಯ ಉದ್ಘಾಟಿಸಿದ ಹರ್ಷವರ್ಧನ್, ನಂತರ ಜೆಎನ್ಎಂಸಿ ಸಭಾಂಗಣದಲ್ಲಿ ಬಿಜೆಪಿ ಬೌದ್ಧಿಕ ಪ್ರಮುಖರ ಸಭೆಯಲ್ಲಿ ಸಂವಾದ ನಡೆಸಿದರು. 

ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ವಿಧಾನ ಪರಿಷತ್ ವಿರೋಧ  ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಆನಂದ ಮಾಮನಿ, ಮುಖಂಡರಾದ ವಿಶ್ವನಾಥ ಪಾಟೀಲ, ರಾಜೇಂದ್ರ ಹರಕುಣಿ, ಶಂಕರಗೌಡ ಪಾಟೀಲ, ಈರಪ್ಪ ಕಡಾಡಿ, ಆರ್.ಎಸ್.ಮುತಾಲಿಕ್, ಕಿರಣ ಜಾಧವ, ರಾಜು ಚಿಕ್ಕನಗೌಡರ್ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಇದ್ದರು. 

Related Articles

Back to top button