Latest

ಸ್ಮಶಾನದಲ್ಲಿ ಮದುವೆಯಾದ ಯುವ ಜೋಡಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ಸದಾಶಿವನಗರ ಸ್ಮಶಾನ ಭೂಮಿಯಲ್ಲಿ ಗುರುವಾರ ಯುವ ಜೋಡೆಯೊಂದು ತಾಳಿ ಕಟ್ಟಿ ಸಂಸಾರ ಜೀವನಕ್ಕೆ ಕಾಲಿಟ್ಟಿದೆ.

ಹಿರೇಬಾಗೇವಾಡಿಯ ರೇಖಾ ಮತ್ತು ತೀರ್ಥಕುಂಡೆಯ ಸೋಪನ್ ಬಾಲಕೃಷ್ಣ ಪರಸ್ಪರ ವಿವಾಹವಾದರು. ಮಾಜಿ ಸಚಿವ ಸತೀಶ ಜಾರಕಿಹೊಳಿ ಪ್ರತಿ ವರ್ಷ ಡಿಸೆಂಬರ್ 6ರಂದು ಮೌಢ್ಯ ವಿರೋಧಿ ದಿನ ಆಚರಿಸುತ್ತಾರೆ. ಅಂದು ಸ್ಮಶಾನದಲ್ಲಿಯೇ ಊಟ, ಸ್ಮಶಾನದಲ್ಲಿಯೇ ನಿದ್ದೆ ಮಾಡುತ್ತಾರೆ. ಅದರ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮದುವೆಯೂ ನಡೆಯಿತು. ನವಜೋಡಿಗೆ 50 ಸಾವಿರ ರೂ. ನೀಡಿ ಆಶಿರ್ವದಿಸಿದ ಜಾರಕಿಹೊಳಿ ಮೌಢ್ಯದ ವಿರುದ್ಧ ಕಿಡಿಕಾರಿದರು. ಸ್ಮಶಾನದಲ್ಲಿ ವಿವಾಹವಾಗುವವರಿಗೆ ಸರಕಾರ 2 ಲಕ್ಷ ರೂ. ನೀಡಬೇಕು ಎಂದು ಅವರು ಹೇಳಿದರು.

ಮೌಢ್ಯದ ವಿರುದ್ಧ ಪ್ರಚಾರ ಮಾಡುವ ವಿದ್ಯಾರ್ಥಿಗಳಿಗೆ ಎಲ್ಲ ನೆರವು ನೀಡುವುದಾಗಿ ಹೇಳಿದ ಅವರು, ತಾವು ಪ್ರತಿ ಚುನಾವಣೆಯಲ್ಲಿ ರಾಹುಕಾಲದಲ್ಲಿಯೇ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ರಾತ್ರಿ ಸ್ಮಶಾನದಲ್ಲಿಯೇ ಊಟ ಮಾಡಿ ಮಲಗಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button