National

*ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ 11 ಜನ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಭಾರತ ಪಾಕ್ ಯುದ್ಧದ ಬಳಿಕ  ದೇಶಾದ್ಯಂತ ನಡೆಸಲಾದ ತನಿಖೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ  ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಒಟ್ಟು 11 ಜನರನ್ನು ಬಂಧಿಸಲಾಗಿದೆ.

ಬೆಹುಗಾರಿಕೆ ಅರೋಪದಡಿ ಬಂಧನವಾಗಿರುವ ಶಂಕಿತರ ಪೈಕಿ ಹರಿಯಾಣ ಮೂಲದ ಟ್ರಾವೆಲ್ ಬ್ಲಾಗರ್ ಜ್ಯೋತಿ ಮಲ್ಲೋತ್ರಾ ಪ್ರಮುಖಳು. ಕೇವಲ ಹಣಕ್ಕಾಗಿ ಪಾಕಿಸ್ತಾನಿ ಏಜೆಂಟರೊಂದಿಗೆ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ಪೊಲೀಸರು ಜ್ಯೋತಿ ಮಲ್ಲೋತ್ರಾ ಜೊತೆಗೆ, 32 ವರ್ಷದ ವಿಧವೆ ಗಜಾಲಾ ಮತ್ತು ಪಂಜಾಬ್‌ನ ಮಲೇರ್‌ಕೋಟಾದ ಯಮೀನ್ ಮೊಹಮ್ಮದ್,ದೇವೇಂದ್ರ ಸಿಂಗ್, ಅರ್ಮಾನ್, ತಾರೀಫ್‌, ನೊಮಾನ್, ಮೊಹಮದ್ ಮುರ್ತಾಜಾ ಅಲಿ, ಶಹಜಾದ್, ಸುಖ್ ಪ್ರೀತ್ ಸಿಂಗ್, ಕರನ್ ಬೀ‌ರ್ ಸಿಂಗ್ ಬಂಧಿತ ಆರೋಪಿಗಳು

ಇನ್ನುಳಿದಂತೆ ಬಂಧಿತ ಇತರ ಆರೋಪಿಗಳಲ್ಲಿ ವಿದ್ಯಾರ್ಥಿಗಳು, ಭದ್ರತಾ ಸಿಬ್ಬಂದಿ, ಸಾಮಾನ್ಯ ಜನರು ಮತ್ತು ಆ್ಯಪ್ ಡೆವಲಪರ್ ಗಳು ಕೂಡ ಸೇರಿದ್ದಾರೆ.  ಈ ಆರೋಪಿಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಹಣದ ಆಸೆ ತೋರಿಸಿ ಗೂಢಚಾರ ಜಾಲಕ್ಕೆ ಸೆಳೆಯಲಾಗುತ್ತಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button