GamesKannada NewsKarnataka NewsNationalPoliticsTravel

*ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಬಿದ್ದ 12 ಜನ: ಸಾವಿನ ಸಂಖ್ಯೆ 6ಕ್ಕೆ ಏರಿಕೆ*

ಪ್ರಗತಿವಾಹಿನಿ ಸುದ್ದಿ: ತೀವ್ರ ಜನದಟ್ಟಣೆಯ ಕಾರಣ ಚಲಿಸುತ್ತಿದ್ದ ಲೋಕಲ್ ರೈಲಿನಿಂದ 12 ಜನರು ಬಿದ್ದಿದ್ದು ಅದರಲ್ಲಿ 6 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ನಿಂದ ಥಾಣೆಯ ಕಸರಾ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಮುಂಬ್ರಾ ಬಳಿ ಏಕಾಏಕಿ 12 ಜನ ರೈಲಿನಿಂದ ಕೆಳಕ್ಕೆ ಬಿದ್ದಿದ್ದಾರೆ. 

ವರದಿಗಳ ಪ್ರಕಾರ, ಅತಿಯಾದ ಜನದಟ್ಟಣೆಯಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲಿನ ಡೋರ್ ನಲ್ಲಿ ನೇತಾಡಿಕೊಂಡು ಸಾಗುತ್ತಿದ್ದರು, ಈ ವೇಳೆ ರೈಲಿನಿಂದ ಸುಮಾರು 12 ಜನ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಹಳಿಯ ಕಬ್ಬಿಣದ ಭಾಗಗಳು ತಲೆಗೆ ತಾಗಿ ಆರು ಜನ ಸಾವನ್ನಪ್ಪಿದ್ದಾರೆ.

ಸದ್ಯ ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Home add -Advt

Related Articles

Back to top button