ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಂದಾಗಿ ಮಕ್ಕಳು ಆತ್ಮಹತ್ಯೆಯಂತ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಮಕ್ಕಳಿಗೆ ಬುದ್ಧಿವಾದ ಹೇಳಬೇಕೆಂದರೂ ತಂದೆ-ತಾಯಿಗಳು ಯೋಚಿಸಬೇಕಾದ ಸ್ಥಿತಿ. ಇದೀಗ ಮಂಗಳೂರಿನಲ್ಲಿ ಇಂತದ್ದೇ ಘಟನೆಯೊಂದು ನಡೆದಿದೆ.
ಮೊಬೈಲ್ ಹೆಚ್ಚು ನೋಡಬೇಡ ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೋಟಿಮುರ ರೆಡ್ ಬ್ರಿಕ್ಸ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ಜ್ಞಾನೇಶ್ ಆತ್ಮಹತ್ಯೆಗೆ ಶರಣಾಗಿರುವ 9ನೇ ತರಗತಿ ವಿದ್ಯಾರ್ಥಿ. ಜಗದೀಶ್ ಹಾಗೂ ವಿನಯಾ ದಂಪತಿಯ ಮಗ. ಯಾವಾಗಲೂ ಮೊಬೈಲ್ ನಲ್ಲಿಯೇ ಮುಳುಗಿರುತ್ತಿದ್ದ ಮಗನೆಗೆ ತಾಯಿ, ಮೊಬೈಲ್ ಬಳಸದಂತೆ ತಾಕೀತು ಮಾಡಿದ್ದರು. ಇದೇ ಕಾರಣಕ್ಕೆ ಬೇಸರಗೊಂಡ ಜ್ಞಾನೇಶ್, ಮಧ್ಯಾಹ್ನ ಸ್ನಾನ ಮಾಡಿಬರುತ್ತೇನೆ ಎಂದು ರೂಮಿಗೆ ಹೋದವನು ವಾಪಸ್ ಬಂದಿಲ್ಲ. ರೂಮಿನ ಬಾಗಿಲು ಹಾಕಿಕೊಂಡು ಜ್ಞಾನೇಶ್ ನೇಣಿಗೆ ಕೊರಳೊಡ್ಡಿದ್ದಾನೆ.
ಕಂಕನವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
*ಸಿಎಂ ಭೇಟಿಯಾದ ರಮೇಶ್ ಜಾರಕಿಹೊಳಿ; CD ಕೇಸ್ ಸಿಬಿಐಗೆ ವಹಿಸುವಂತೆ ಮನವಿ*
https://pragati.taskdun.com/ramesh-jarakiholicd-casecbicm-basavaraj-bommaimeet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ