Latest

*ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡುತ್ತಾ ಗದ್ಗದಿತರಾದ ಸ್ಪೀಕರ್ ಕಾಗೇರಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 15ನೇ ವಿಧಾನಸಭೆಯ ಕೊನೆ ಅಧಿವೇಶನಕ್ಕೆ ಇಂದು ತೆರೆ ಬಿದ್ದಿದ್ದು, ವಿಧಾನಮಂಡಲದ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು.

ಅಧಿವೇಶನದ ಕೊನೇ ದಿನವಾದ ಇಂದು ಮಾಜಿ ಸಿಎಂ, ಶಿಕಾರಿಪುರದ ಶಾಸಕ ಬಿಎಸ್.ಯಡಿಯೂರಪ್ಪನವರಿಗೆ ವಿದಾಯ ಹೇಳಲಾಯಿತು. ವಿಧನಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ವಿದಾಯಯದ ಭಾಷಣ ಮಾಡುತ್ತಾ, ತಮ್ಮ ರಾಜಕೀಯ ಜೀವನವನ್ನು ಮೆಲುಕು ಹಾಕಿದರು. ಅಲ್ಲದೇ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಸಿಎಂ ಬಸವರಾಜ್ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವ ಸುಧಾಕರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶರವಣ ಸೇರಿದಂತೆ ಹಲವು ನಾಯಕರು ಮಾತನಾಡಿದರು. ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ 15ನೇ ವಿಧಾನಸಭೆಯ ಕೊನೇ ಅಧಿವೇಶನದ ಬಗ್ಗೆ ಮಾತನಾಡುತ್ತಾ, ಎಲ್ಲರೂ ಒಳ್ಳೆಯ ವಿಚಾರ, ಕೆಲಸಗಳನ್ನು ಮುಂದುವರೆಸೋಣ ಎಂದು ಹೇಳಿದರು. ಇದೇ ವೇಳೆ ಭಾವುಕರಾದ ಸ್ಪೀಕರ್ ಕ್ಷಣಕಾಲ ಗದ್ಗದಿತರಾದರು. ಅಧಿವೇಶನದ ಕೊನೆ ದಿನ ಮಾತನಾಡಲು ಅವಕಾಶ ಸಿಗದ ಸದಸ್ಯರು ಹಾಗೂ ಎಲ್ಲರೂ ತಮ್ಮ ಅಭಿಪ್ರಾಯ, ಅನುಭವವನ್ನು ಬರೆದು ತಮ್ಮ ಕಚೇರಿಗೆ ತಲುಪಿಸಿದರೆ ಆ ದಾಖಲೆಗಳನ್ನು ಇಡುವ ವ್ಯವಸ್ಥೆ ಮಾಡುತ್ತೇನೆ ಎಂದರು. ಬಳಿಕ ರಾಷ್ಟ್ರಗೀತೆಯೊಂದಿಗೆ ಅಧಿವೇಶನವನ್ನು ಅನಿರ್ಧಿಷಾವಧಿಗೆ ಮುಂದೂಡಲಾಗುವುದು ಎಂದು ತಿಳಿಸಿದರು.

*ಸಿದ್ದರಾಮಯ್ಯ ಕಾರ್ಯವೈಖರಿ ಶ್ಲಾಘಿಸಿದ ಮಾಜಿ ಸಿಎಂ; ದೇವೇಗೌಡರು ನಮಗೆ ಆದರ್ಶ ಎಂದ ಯಡಿಯೂರಪ್ಪ*

https://pragati.taskdun.com/b-s-yedyurappavidhanasabhelast-speech/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button