Kannada NewsLatest
ಹುಡುಗನಿಗೆ ಕನ್ಯೆ ನೋಡಲು ಹೊರಟವರು ಮಸಣಕ್ಕೆ
ಪ್ರಗತಿವಾಹಿನಿ ಸುದ್ದಿ, ಹಾವೇರಿ:
ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ದುರ್ಮರಣಕ್ಕೀಡಾಗಿದ್ದಾರೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಕ್ರಾಸ್ ಬಳಿ ಘಟನೆ ನಡೆದಿದೆ.
ಹೊಸರಿತ್ತಿ ಗ್ರಾಮದ ಜಗದೀಶ ದೀಪಾಳಿ (28) ಮತ್ತು ಹನುಮಂತ ದೀಪಾಳಿ (60)ಮೃತ ದುರ್ದೈವಿಗಳು.
ಚಿಕ್ಕಪ್ಪನ ಜೊತೆ ಜಗದೀಶ ಹುಡುಗಿ ನೋಡಲು ಹೊರಟಾಗ ಘಟನೆ ನಡೆದಿದೆ. ರಾಣೇಬೆನ್ನೂರಿಗೆ ಹೋಗುವಾಗ ಎದುರಿಗೆ ಬಂದ್ ಬಸ್ ಸ್ಟೇರಿಂಗ್ ಕಟ್ ಆಗಿ ಬೈಕ್ ಗೆ ಡಿಕ್ಕಿ ಹೊಡೆದಿದೆ.
ರಾಣೇಬೆನ್ನೂರು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




