Karnataka News

ಬೆಂಗಳೂರು ಟು ತಿರುಪತಿ: ನಿಂಬಾಳಕರ್ ದಂಪತಿ ಪಾದಯಾತ್ರೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳಕರ ಹಾಗೂ ಪತಿ, ಹಿರಿಯ ಪೊಲೀಸ್ ಅಧಿಕಾರಿ ಹೇಮಂತ ನಿಂಬಾಳಕರ್ ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆ ಹೊರಟಿದ್ದಾರೆ.

 ಶನಿವಾರ  ಮುಂಜಾನೆ ೪ ಘಂಟೆಯಿಂದ  ಸಹೋದರರಾದ ಮೀಲಿಂದ ಬಾವು,  ಸುರೇಶ ಬಾವು ಜೊತೆ ಸೇರಿ ಪಾದಯಾತ್ರೆ ಆರಂಭಿಸಿದ್ದು, ಮೊದಲ ದಿನ 30 ಕಿಮೀ ದೂರದ ಹೊಸಕೋಟೆಯಲ್ಲಿ ಉಳಿದುಕೊಂಡಿದ್ದಾರೆ.

Home add -Advt

ಸುಮಾರು ಹತ್ತು ದಿನಗಳ ವರೆಗೆ ಕಾಲ್ನಡಿಗೆ ಮುಖಾಂತರ ತಿರುಪತಿ ಬಾಲಾಜಿ ವೆಂಕಟರಮಣನ  ದರ್ಶನ ಹಾಗೂ ಖಾನಾಪುರ ತಾಲೂಕಿನ ಸುಖ, ಸಂತೋಷ, ಅಭಿವೃದ್ಧಿಗೊಸ್ಕರ ‘ಪಾದಯಾತ್ರೆ’ , ಸದ್ಬಾವನಾ ಯಾತ್ರಾ, ಪ್ರಾರ್ಥನೆ ನಡಿಗೆಯನ್ನು ಕೈಗೊಂಡಿದ್ದಾಗಿ ಅಂಜಲಿ ನಿಂಬಾಳಕರ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಖಾನಾಪುರ ತಾಲೂಕಿನ ಉಜ್ವಲ ಭವಿಷ್ಯ ಮತ್ತು ತಾಲೂಕಿನ ಅಭಿವೃದ್ಧಿಗೊಸ್ಕರ ಪಾದಯಾತ್ರೆ ಕೈಗೊಂಡಿದ್ದು ಖಾನಾಪುರ ಜನತೆಯ ಉಜ್ವಲ ಭವಿಷ್ಯಕ್ಕಾಗಿ, ಅಭಿವೃದ್ಧಿಗೆ  ತಿರುಪತಿ ತಿಮ್ಮಪ್ಪನ ಆಶೀರ್ವಾದಕ್ಕೋಸ್ಕರ ಪ್ರಾರ್ಥನಾ ನಡಿಗೆ ಪ್ರಾರಂಭಿಸಿದ್ದಾಗಿ ಹೇಳಿದರು.

 

Related Articles

Back to top button