
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಾಡಿಗೆ ಮನೆ ನೋಡಲೆಂದು ಅಜ್ಜಿಯ ಜೊತೆಗೆ ಹೋಗಿದ್ದ 2 ವರ್ಷದ ಪುಟ್ಟ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಇನ್ವೆಸ್ಟ್ ಮೆಂಟ್ ಲೇಔಟ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ದಿವ್ಯಾಂಶ್ ರೆಡ್ಡಿ (2) ಮೃತ ಬಾಲಕ. ಹಲವು ದಿನಗಳಿಂದ ಬಾಲಕನ ಅಜ್ಜಿ ಬಾಡಿಗೆ ಮನೆಗಾಗಿ ಹುಡುಕಾಡುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಒಂದು ಫ್ಲ್ಯಾಟ್ ಬಾಡಿಗೆಗೆ ಇದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅಜ್ಜಿ ಮೊಮ್ಮಗನನ್ನು ಕರೆದುಕೊಂಡು ಮನೆ ನೋಡಲು ಹೋಗಿದ್ದಾರೆ.
ಈ ವೇಳೆ ಬಾಲಕ ದಿವ್ಯಾಂಶ್, ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಜಿ ಮೇಯರ್ ಶಿವಾಜಿ ಸುಂಠರಕರ್, ಶಿವಸೇನೆಯ ಪ್ರಕಾಶ ಶಿರೋಳ್ಕರ್, ಶ್ರೀರಾಮ ಸೇನೆಯ ರಮಾಕಾಂತ್ ಕೊಂಡುಸ್ಕರ್ ಆರೆಸ್ಟ್
ಬೆಳಗಾವಿ: ಪೊಲೀಸರು ತೆಗೆದುಕೊಳ್ಳುವ ಕ್ರಮ ಕಾದು ನೋಡಿ ಎಂದ ಗೃಹ ಸಚಿವ