GIT add 2024-1
Laxmi Tai add
Beereshwara 33

*ಚಿರತೆ ದಾಳಿ: 21 ಕುರಿಗಳನ್ನು ಕೊಂದು ಎರಡು ಕುರಿ ಹೊತ್ತೊಯ್ದ ಚೀತಾ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಹೊಲದಲ್ಲಿ ಚಿರತೆ ದಾಳಿ ನಡೆಸಿ 21 ಕುರಿಗಳನ್ನು ಕೊಂದು ಎರಡು ಕುರಿಗಳನ್ನು ಹೊತ್ತೊಯ್ದ ಘಟನೆ ಬಳ್ಳಾರಿ ಜಿಲ್ಲೆಯ ಸಂಜೀವತಾಯನಕೋಟೆ ಗ್ರಾಮದಲ್ಲಿ ನಡೆದಿದೆ.

Emergency Service

ತಡರಾತ್ರಿ ಹೊಲಕ್ಕೆ ನುಗ್ಗಿದ ಚಿರತೆ 21 ಕುರಿಗಳನ್ನು ಸಾಯಿಸಿದೆ. 2 ಕುರಿಗಳನ್ನು ಹೊತ್ತೊಯ್ದಿದೆ. ರೈತ ಸಣ್ಣತಿಮ್ಮಪ್ಪ ಎಂಬುವವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Bottom Add3
Bottom Ad 2