*ಸರ್ಕಾರಿ ಆಸ್ಪತ್ರೆಯಲ್ಲಿ ದುರಂತ: 24 ಗಂಟೆಯಲ್ಲಿ 12 ನವಜಾತ ಶಿಶುಗಳು ಸೇರಿ 24 ರೋಗಿಗಳು ಸಾವು*
ಪ್ರಗತಿವಾಹಿನಿ ಸುದ್ದಿ; ನಾಂದೇಡ್: ನಾಂದೇಡ್ ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕಳೆದ 24 ಗಂಟೆಯಲ್ಲಿ 12 ನವಜಾತ ಶಿಶುಗಳು ಸೇರಿ ಬರೋಬ್ಬರಿ 24 ರೋಗಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಈ ದುರಂತ ದೇಶಾದ್ಯಂತ ಚರ್ಚೆಗೆ ಕರಣವಾಗಿದೆ. ಆಸ್ಪತ್ರೆಯವರು ಹೇಳುವ ಪ್ರಕಾರ ವೈದ್ಯಕೀಯ ಸಿಬ್ಬಂದಿ ಹಾಗು ಔಷದಗಳ ಕೊರತೆಯಿಂದಾಗಿ 12 ನವಜಾತ ಶಿಶುಗಳು ಹಾಗೂ 12 ರೋಗಿಗಳು ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸದದ್ಯರ ತಜ್ಞರ ಸಮಿತಿ ರಚಿಸಿ, ತನಿಖೆಗೆ ಆದೇಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6 ಮಹಿಳೆಯರು, 6 ಪುರುಷರು ಹಾಗೂ 12 ನವಜಾತ ಶಿಶುಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಹಿಳೆಯರಲ್ಲಿ ಹಲವರು ಹಾವಿನ ಕಡಿತಕ್ಕೆ ಚಿಕಿತ್ಸೆ ಪಡೆಯಲು ಬಂದವರಾಗಿದ್ದರು ಎಂದು ಆಸ್ಪತ್ರೆಯ ಡಾ. ಶಾಮರಾವ್ ವಾಕೋಡೆ ತಿಳಿಸಿದ್ದಾರೆ.
ಈ ಆಸ್ಪತ್ರೆಯಲ್ಲಿ 500 ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟು ಸಾಮರ್ಥ್ಯವಿದೆ. ಆದರೆ1200ಕ್ಕೂ ಹೆಚ್ಚು ರೋಗಿಗಳಿದ್ದಾರೆ. ಔಷಧಗಳ ಕೊರತೆಯಿಂದ ಈ ಸಾವು ಸಂಭವಿಸಿದೆ ಎಂದು ಆಸ್ಪತ್ರೆ ಸಿಬ್ಬಂದಿಗಳು ಹೇಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಔಷಧಿಗಳ ಕೊರತೆಯಿಂದ ರೋಗಿಗಳು, ಮಕ್ಕಳು ಸಾವನ್ನಪ್ಪುತ್ತಿರುವುದು ಮಹಾರಾಷ್ಟ್ರ ಸರ್ಕರದ ವಿರುದ್ಧ ವಿಪಕ್ಷಗಳು ಕೆಂಡಕಾರಿವೆ.
ಪ್ರಚಾರಕ್ಕಾಗಿ ಸಾವಿರಾರು ಕೋಟಿ ವ್ಯಯಮಾಡುವ ಬಿಜೆಪಿ ನಾಯಕರು ರೋಗಿಗಳ ಔಷಧಿಗೆ ಹಣ ನೀಡುತ್ತಿಲ್ಲ. ಬಿಜೆಪಿಯವರ ದೃಷ್ಟಿಯಲ್ಲಿ ಬಡವರ ಜೀವಕ್ಕೆ ಬೆಲೆಯಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ