Kannada NewsKarnataka News

16ರಂದು ಕೆಎಲ್ಎಸ್ ಐಎಂಇಆರ್ ಸಂಸ್ಥಾಪನಾ ದಿನ

16ರಂದು ಕೆಎಲ್ಎಸ್ ಐಎಂಇಆರ್ ಸಂಸ್ಥಾಪನಾ ದಿನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆಎಲ್ಎಸ್ ನ ಅಂಗ ಸಂಸ್ಥೆ ಐಎಇಆರ್ ಸೋಮವಾರ ತನ್ನ 29ನೇ ಸಂಸ್ಥಾಪನಾ ದಿನ ಆಚರಿಸಿಕೊಳ್ಳುತ್ತಿದೆ.

ಐಎಂಇಆರ್ ನಿರ್ದೇಶಕ ಅತುಲ್ ದೇಶಪಾಂಡೆ ಪತ್ರಿಕಾಗೋಷ್ಠಿಯಲ್ಲಿ ಇಂದು ಈ ಕುರಿತು ವಿವರ ನೀಡಿದರು.

ವ್ಯವಸ್ಥಾಪನಾ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ (ಐಎಂಇಆರ್)ನ್ನು ೧೯೯೧ರಲ್ಲಿ ಕರ್ನಾಟಕ ಕಾನೂನು ಸಂಸ್ಥೆಯ ಪೋಷಕರಾಗಿದ್ದ ದಿ. ರಾವಸಾಹೇಬ ಗೋಗಟೆ ಅವರ ಜನ್ಮದಿನವಾದ ಸೆ. ೧೬ ರಂದು ಸ್ಥಾಪಿಸಲಾಯಿತು. ಮ್ಯಾನೇಜಮೆಂಟ್ ಶಿಕ್ಷಣ, ಸಂಶೋಧನೆ ಹಾಗೂ ಔದ್ಯಮಿಕ ಸಲಹೆ ನೀಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಸಂಸ್ಥೆ ದೇಶದ ಈ ಭಾಗದಲ್ಲಿ ವಿದ್ಯಾರ್ಥಿಗಳು, ಉದ್ಯಮಿಗಳ ಮೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ. ಸಂಸ್ಥೆ ಎರಡು ವರ್ಷಗಳ ಪೂರ್ಣಾವಧಿ ಎಂಬಿಎ ಪದವಿ ಶಿಕ್ಷಣ ನೀಡುತ್ತಿದ್ದು, ಎಐಸಿಟಿಇಯಿಂದ ಗುರುತಿಸಲ್ಪಟ್ಟು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿದೆ.
ಸಂಸ್ಥೆಯ 29ನೆಯ ಸಂಸ್ಥಾಪನಾ ದಿನಾಚರಣೆಯನ್ನು ಸೆ. 16ರಂದು ಸಂಜೆ 4.30ಕ್ಕೆ ಕೆಎಲ್‌ಎಸ್
ಐಎಂಇಆರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಹಾಗೂ ವಿಶೇಷವಾಗಿ ಕರ್ನಾಟಕ ಕಾನೂನು ಸಂಸ್ಥೆ ಪ್ರಗತಿಗಾಗಿ ಉದ್ಯಮಿ ರಾವಸಾಹೇಬ್ ಗೋಗಟೆ ಅವರ ಕೊಡುಗೆ ಸ್ಮರಿಸಿ ಅವರ ಜನ್ಮದಿನದಂದೇ ಸಂಸ್ಥಾಪನಾ ದಿನ ಆಚರಿಸಲಾಗುತ್ತದೆ. ಈ ಭಾಗದ ಮ್ಯಾನೇಜಮೆಂಟ್ ವಿದ್ಯಾರ್ಥಿಗಳು, ಉದ್ಯಮಿಗಳು ಪ್ರತಿ ವರ್ಷ ಎದುರುನೋಡುವ ಕಾರ್ಯಕ್ರಮ ಇದಾಗಿದ್ದು, ಈ ಸಂದರ್ಭದಲ್ಲಿ ಉದ್ಯಮದ ಬೆಳವಣಿಗೆಗಾಗಿ ಸ್ಥಳೀಯ ಸಾಧಕ ಉದ್ಯಮಿಯೊಬ್ಬರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.
ಸಂಸ್ಥಾಪನಾ ದಿನಾಚರಣೆ ಆಂಗವಾಗಿ ಮುನ್ನಾದಿನ ಸೆ. 15ರಂದು ಸಂಜೆ 6 ಗಂಟೆಗೆ ಐಎಂಇಆರ್
ಸಭಾಗೃಹದಲ್ಲಿ ಪುಣೆಯ ಪಂ. ಸುಹಾಸ ವ್ಯಾಸ್ ಅವರ ಹಿಂದೂಸ್ಥಾನಿ ಸಂಗೀತ ಸಂಜೆ ಕಾರ್ಯಕ್ರಮ
ಅಯೋಜಿಸಲಾಗಿದೆ.
ಕರ್ನಾಟಕ ಕಾನೂನು ಸಂಸ್ಥೆ ಚೇರಮನ್‌ರಾದ ಎಂ. ಆರ್. ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ
ವಹಿಸುವರು. ಪುಣೆಯ ಅತ್ಯಾಸಾ ಕನ್ಸಲ್ಟಿಂಗ್ ಪ್ರೈ.ಲಿ., ಸಂಸ್ಥಾಪಕ ನಿರ್ದೇಶಕರಾದ ನಿಕೇತ ಕಾರಜಗಿ
ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗೋಗಟೆ ಕುಟುಂಬದ ಸದಸ್ಯರು ಗೌರವ ಅತಿಥಿಗಳಾಗಿ
ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಸಾಧಕ ಉದ್ಯಮಿ, ಓರಿಯಾನ್ ಹೈಡ್ರಾಲಿಕ್ಸ ಪ್ರೈ.ಲಿ., ಜಂಟಿ ನಿರ್ದೇಶಕ ಕೀಥ್
ಮಚಾಡೋ ಅವರನ್ನು ಸನ್ಮಾನಿಸಲಾಗುವುದು.
ಈ ಹಿಂದೆ ಸಂಸ್ಥೆಯು ಬೆಳಗಾಮ್ ಫೆರ್ರೋ ಕಾಸ್ಟ್ ವ್ಯವಸ್ಥಾಪಕ ನಿರ್ದೇಶಕ ಸಚೀನ್ ಸಬ್ನಿಸ್, ಪ್ರಗತಿ
ಇಂಜಿನಿಯರಿಂಗ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹೇಶ ಭಿರಂಗಿ ಹಾಗೂ ವೇಗಾ ಆಟೋ
ಎಕ್ಸೆಸರೀಸ್ ಸಂಸ್ಥೆಯ ಎಂ.ಡಿ. ದಿಲೀಪ್ ಚಿಂಡಕ್ ಅವರನ್ನು ಸನ್ಮಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಐಎಂಇಆರ್ ನ್ಯಾಕ್‌ನಿಂದ ಎ ಶ್ರೇಣಿ (ಸಿಜಿಪಿಎ ೩.೨೪) ಗಳಿಸಿದ್ದು, ವಿಶ್ವದರ್ಜೆಯ ಸಂಸ್ಥೆಗಳಾದ ಐಐಟಿ
ಮದ್ರಾಸ್, ಇಡಿಐ ಆಹಮದಾಬಾದ್, ಸಿಐಐ-ಐಎಲ್ ಚೆನ್ನೈ ಮತ್ತು ಟೈ-ಹುಬ್ಬಳ್ಳಿ ಮೊದಲಾದವುಗಳ ಜತೆಗೆ ಶೈಕ್ಷಣಿಕ ಒಪ್ಪಂದಗಳನ್ನು ಮಾಡಿಕೊಂಡಿದೆ. ನುರಿತ ಶಿಕ್ಷಕರನ್ನು ಹೊಂದಿರುವ ಸಂಸ್ಥೆಯ ಶೇ. ೯೦ರಷ್ಟು ವಿದ್ಯಾರ್ಥಿಗಳು ೨೦೧೭ರಲ್ಲಿ ಹಾಗೂ ಶೇ. ೯೨ರಷ್ಟು ವಿದ್ಯಾರ್ಥಿಗಳು ೨೦೧೮ರಲ್ಲಿ ಪ್ರತಿಷ್ಠಿತ ಉದ್ಯಮಗಳಲ್ಲಿ ನೌಕರಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅತುಲ್ ದೇಶಪಾಂಡೆ ವಿವರಿಸಿದರು.

ಶಶಿಧರ ಚೀನಿವಾರ, ಆರೀಫ್ ಶೇಕ್, ಇಗ್ನೇಶ್ ಸಾಕ್ರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button