Latest

*ಮತ್ತೊಮ್ಮೆ ರೆಪೋ ದರ ಕಡಿತ ಮಾಡಿದ RBI*

ಪ್ರಗತಿವಾಹಿನಿ ಸುದ್ದಿ: ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ರಿಲೀಫ್ ನೀಡಿದೆ. ರೆಪೋ ದರವನ್ನು ಆರ್ ಬಿಐ ಇಳಿಕೆ ಮಾಡಿದೆ.

ರೆಪೋ ದರವನ್ನು ಕಡಿತ ಮಾಡಿ ಆರ್ ಬಿ ಐ ಗವರ್ನರ್ ಸಂಜಯ್ ಮಲ್ಹೋತ್ರಾ ಘೋಷಣೆ ಮಾಡಿದ್ದಾರೆ. ರೆಪೋ ದರವನ್ನು ಶೇ. 6ರಷ್ಟು ಇಳಿಸಲಾಗಿದೆ. ಈ ಮೂಲಕ ಇಎಂಐ ದರ ಕಡಿತವಾಗುವ ಸಾಧ್ಯತೆ ಇದೆ. ರೆಪೋ ದರ ಶೇ.6.25ರಿಂದ ಶೇ.೬ಕ್ಕೆ ಇಳಿಕೆಯಾಗಿದೆ.

ರೆಪೋ ದರವನ್ನು 25 ಬಿಪಿಎಸ್ ನಿಂದ 6 ಪರ್ಸೆಂಟ್ ಗೆ ಇಳಿಸಲು ಎಂಪಿಸಿ ನಿರ್ಧರಿಸಿದೆ ಎಂದು ಸಂಜವೀ ಮಲ್ಹೋತ್ರಾ ತಿಳಿಸಿದ್ದಾರೆ. ಗೃಹ ಸಾಲ ಸೇರಿದಂತೆ ಹಲವು ಸಾಲಗಳ ಬಡ್ಡಿ ದರ ಕಡಿಮೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button