Latest

ಜಮೀರ್ ನಿವಾಸದ ಮೇಲಿನದ್ದು ಐಟಿ ದಾಳಿಯಲ್ಲ….

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ನಡೆದಿರುವುದು ಆದಾಯ ತೆರಿಗೆ ಇಲಾಖೆಯ ದಾಳಿ ಅಲ್ಲ, ಅದು ಜಾರಿ ನಿರ್ದೇಶನಾಲಯದ ದಾಳಿ (ಇಡಿ) ಎನ್ನುವುದು ಬಹಿರಂಗವಾಗಿದೆ.

ಅಂದರೆ ಇದು ಐಎಂಎ ಹಗರಣದ ಸಂಬಂಧದ ದಾಳಿ ಎನ್ನುವುದು ಖಚಿತವಾಗಿದೆ.

ಇಂದು ಬೆಳಗ್ಗೆಯೇ ಜಮೀರ್ ಅಹ್ಮದ್ ಅವರಿಗೆ ಸಂಬಂಧಿಸಿದ 6 ಕಡೆಗಳಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇದು ಆದಾಯ ತೆರಿಗೆ ದಾಳಿ ಎಂದು ಶಂಕಿಸಲಾಗಿತ್ತು. ಆದರೆ ಇದು ಐಟಿ ದಾಳಿ ಅಲ್ಲ, ಇಡಿ ದಾಳಿ ಎನ್ನುವುದು ಬಹಿರಂಗವಾಗಿದೆ.

ಐಎಂಎ ಹಗರಣದಲ್ಲಿ ಜಮೀರ್ 400 ಕೋಟಿ ರೀ. ಲಂಚ ಪಡೆದಿದ್ದಾರೆ ಎನ್ನುವ ಆರೋಪವಿದೆ.

ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಆದಾಯ ತೆರಿಗೆ ದಾಳಿ

Related Articles

Back to top button