Kannada NewsKarnataka NewsLatest

*ನವಜಾತ ಶಿಶುವನ್ನು ಆಸ್ಪತ್ರೆ ತೊಟ್ಟಿಲಲ್ಲಿ ಬಿಟ್ಟುಹೋದ ತಾಯಿ*

ಪ್ರಗತಿವಾಹಿನಿ ಸುದ್ದಿ; ಮುಂಡಗೋಡ: ನವಜಾತ ಶಿಶುವನ್ನು ಆಸ್ಪತ್ರೆಯ ತೊಟ್ಟಿಲಲ್ಲಿ ಬಿಟ್ಟು ಹೋಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ಪಟ್ಟಣದಲ್ಲಿ ನಡೆದಿದೆ.

ಮೂರು ದಿನದ ಹಸುಗೂಸನ್ನು ತಾಯಿಯೊಬ್ಬರು ಜ್ಯೋತಿ ಆರೋಗ್ಯ ಆಸ್ಪತ್ರೆಯ ಮುಂದಿರುವ ತೊಟ್ಟಿಲಲ್ಲಿ ಮಲಗಿಸಿ ಹೋಗಿದ್ದಾರೆ. ಮುಂಡಗೋಡ ಪಟ್ಟಣದಲ್ಲಿ ಯಾರಾದರೂ ಮಗುವನ್ನು ಸಾಕಲಾಗದೇ ಎಲ್ಲೆಂದರಲ್ಲಿ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಆಸ್ಪತ್ರೆಯ ಮುಂಭಾಗದಲ್ಲಿ ಒಂದು ತೊಟ್ಟಿಲನ್ನು ಇಡಲಾಗಿದ್ದು, ಈ ತೊಟ್ಟಿಲಿನಲ್ಲಿ ಮಗುವೊಂದನ್ನು ಇಟ್ಟು ಹೋಗಿದ್ದಾರೆ.

Home add -Advt

ಮಗುವನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿಗಳು ತಕ್ಷಣ ಪೊಲೀಸರಿಗೆ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕರಿಗಳು ಮಗುವಿಗೆ ಚಿಕಿತ್ಸೆ ನೀಡಿ ಬಳಿಕ ಶಿರಸಿಯ ದತ್ತು ಕೇಂದ್ರಕ್ಕೆ ನೀಡಲು ಕ್ರಮ ಕೈಗೊಂಡಿದ್ದಾರೆ.


Related Articles

Back to top button