Kannada NewsKarnataka NewsLatest

ಮೂವರು ಗಣ್ಯರ ನಿಧನ

ರೈತ ಮುಖಂಡ ಬಸವರಾಜ ಭಾವಿಕಟ್ಟಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಅಕ್ಕತಂಗೇರಹಾಳ ಗ್ರಾಮದ ಹಿರಿಯರು, ರೈತಮುಖಂಡರಾದ ಬಸವರಾಜ ನಾನಾಪ್ಪ ಭಾವಿಕಟ್ಟಿ   ನಿಧನರಾಗಿದ್ದಾರೆ.
ರೈತ ಮುಖಂಡರಾದ ಬಸವರಾಜ ಭಾವಿಕಟ್ಟಿಯವರು ರೈತ ಸಂಘದಲ್ಲಿ ನಿಸ್ವಾರ್ಥ ಸೇವೆಸಲ್ಲಿಸಿರುವ ಇವರು, ಗೋಕಾಕ ತಾಲೂಕಾ ರೈತಸಂಘದ ಅಧ್ಯಕ್ಷರಾಗಿಯೂ ಸೇವೆ ಸೇವೆ ಸಲ್ಲಿಸಿದ್ದಾರೆ. ಇವರಿಗೆ ೮೯ ವರ್ಷ ವಯಸ್ಸಾಗಿತ್ತು, ಧರ್ಮ ಪತ್ನಿ, ಹೆಣ್ಣು ಮಗಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ರೈತ ಮುಖಂಡರಾದ ಶಶಿಕಾಂತ ನಾಯಿಕ, ಕಲ್ಯಾಣರಾವ ಮುಚಳಂಬಿ ಸಂತಾಪ ಸೂಚಿಸಿದ್ದಾರೆ.

 

Home add -Advt

ಶಿವಯೋಗಿ ರು. ಶಿಗಿಹಳ್ಳಿ ನಿಧನ


ಬೆಳಗಾವಿ   – ಬೆಳಗಾವಿಯ ಶ್ರೀನಗರದ ನಿವಾಸಿಯಾದ ನಿವೃತ್ತ ಎಂಜಿನಿಯರ್ ಶಿವಯೋಗಿ ರು. ಶೀಗಿಹಳ್ಳಿ ನಿಧನರಾಗಿದ್ದಾರೆ.
ಮೂಲತ: ತುರುಮುರಿ ಗ್ರಾಮದವರಾದ ಇವರು ಕಿರಿಯ ಆಭೀಯಂತರರಾಗಿ ಗೋಕಾಕ, ಬೈಲಹೊಂಗಲ, ಅಥಣಿ , ಬಾಗಲಕೋಟೆ, ನಿಪ್ಪಾಣಿ ನಗರ ಪಾಲಿಕೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಇವರು ತಮ್ಮ ೭೫ನೇ ವಯಸ್ಸಿನಲ್ಲಿ  ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಮೃತರು ಧರ್ಮ ಪತ್ನಿ, ಇಬ್ಬರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪ್ರಕಾಶ ಹಿಡದುಗ್ಗಿ ನಿಧನ

ಬೆಳಗಾವಿ : ಬಾಂಧೂರ ಗಲ್ಲಿ ನಿವಾಸಿಯಾಗಿದ್ದ ಪ್ರಕಾಶ ವೀರಭದ್ರಪ್ಪಾ ಹಿಡದುಗ್ಗಿ (೭೦)  ಇವರು  ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಮೃತರು ಪತ್ನಿ, ತಮ್ಮ, ತಂಗಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Related Articles

Back to top button