ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜಧಾನಿ ಬೆಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಏರ್‌ಪೋರ್ಟ್ ಸಿಟಿಯಲ್ಲಿ ಅತ್ಯಾಧುನಿಕ 3ಡಿ ಪ್ರಿಂಟಿಂಗ್ ಸೌಲಭ್ಯ ಕಾರ್ಯಾರಂಭಿಸಿದೆ.
“ಈ ಸೌಲಭ್ಯ ಏರ್‌ಪೋರ್ಟ್ ಸಿಟಿಯನ್ನು ತಂತ್ರಜ್ಞಾನದ ಕೇಂದ್ರವಾಗಿ ಪರಿವರ್ತಿಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್ ಸಿಇಒ ರಾವ್ ಮುನುಕುಟ್ಲಾ ಹೇಳಿದ್ದಾರೆ. “3D ಮುದ್ರಣ ಸೃಜನಶೀಲತೆಯ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಕೈಗಾರಿಕೆಗಳಲ್ಲಿ ಆಧುನಿಕತೆಯ ಮೌಲ್ಯಮಾಪನಕ್ಕೆ ಅವಕಾಶ ನೀಡುತ್ತದೆ” ಎಂದು ಅವರು ಹೇಳಿದರು.
“ಈ ತಂತ್ರಜ್ಞಾನ ಜ್ಞಾನ-ಆಧಾರಿತ ಆರ್ಥಿಕತೆಯನ್ನೊಳಗೊಂಡ ಕಾರ್ಯತಂತ್ರದ ಸ್ಥಳವಾಗಿ ಹಾಗೂ ಭಾರತದ ಸಿಲಿಕಾನ್ ವ್ಯಾಲಿಯಾಗಿ ಬೆಂಗಳೂರಿನ ಸ್ಥಾನ ಬಲಪಡಿಸಲು ಇದು ಸಹಾಯ ಮಾಡುತ್ತದೆ. ವಿಶ್ವದರ್ಜೆಯ ಬಿಡಿ ವ್ಯಾಪಾರ, ಭೋಜನ ಮತ್ತು ಮನರಂಜನಾ ಸೌಲಭ್ಯಗಳು ಏರ್‌ಪೋರ್ಟ್ ಸಿಟಿಯನ್ನು ನೈಜ ಜಾಗತಿಕ ತಾಣವನ್ನಾಗಿ ಮಾಡಲಿವೆ ಎಂದು ರಾವ್ ಮುನುಕುಟ್ಲಾ ಹೇಳಿದ್ದಾರೆ.
ನಿರ್ಮಾಣ, ಆಟೋಮೋಟಿವ್, ಏರೋಸ್ಪೇಸ್, ಮಿಲಿಟರಿ, ಬಯೋಟೆಕ್ (ಮಾನವ ಅಂಗ ಬದಲಾವಣೆ) ಆಭರಣ ವಿನ್ಯಾಸ, ಶಿಕ್ಷಣ ಮತ್ತು ಇತರ ಕ್ಷೇತ್ರಗಳಂತಹ ಕೈಗಾರಿಕೆಗಳಲ್ಲಿ 3D ಪ್ರಿಂಟಿಂಗ್ ತಾಂತ್ರಿಕತೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಭವಿಷ್ಯದಲ್ಲಿ, ಏರೋಸ್ಪೇಸ್ ಉದ್ಯಮದಿಂದ ಸ್ಥಾಪಿತ ಬೇಡಿಕೆಯನ್ನು ಪೂರೈಸಲು ಪಿಕೆ ಗ್ರೂಪ್ 3D ಲೋಹದ ಮುದ್ರಣ ಘಟಕವನ್ನು ಸ್ಥಾಪಿಸಲು ಯೋಜಿಸಿದೆ.ಇದು ವ್ಯಾಪಕ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸಹ ಕಲ್ಪಿಸಲಿದೆ ಎಂದು ಪಿಕೆ ಗ್ರುಪ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ. ಇ. ಶಾನವಾಜ್ ತಿಳಿಸಿದ್ದಾರೆ.
ಸಾಂಪ್ರದಾಯಿಕ ಉತ್ಪಾದನೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. 3D ಮುದ್ರಣ ಪರಿಸರ ಸ್ನೇಹಿ ತಂತ್ರಜ್ಞಾನವಾಗಿದೆ. ಏರ್‌ಪೋರ್ಟ್ ಸಿಟಿಯಲ್ಲಿ ಸ್ಥಾಪಿಸಲಾದ ಬೃಹತ್ ಗಾತ್ರದ 3D ಸ್ಯಾಂಡ್ ಮುದ್ರಣ ಯಂತ್ರ ಜಾಗತಿಕವಾಗಿ ಇದೇ ಮೊದಲನೆಯದಾಗಿದೆ ಎಂದು ಅವರು ಹೇಳಿದ್ದಾರೆ.
ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ