Latest

ಅರವಿಂದ್ ಬೆಲ್ಲದ್ ಮುಂದಿನ ಸಿಎಂ! – ಬೆಂಬಲಿಗರ ಪೋಸ್ಟ್

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಶಾಸಕ ಅರವಿಂದ್ ಬೆಲ್ಲದ್ ದೆಹಲಿ ಭೇಟಿ ಬಳಿಕ ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಆರಂಭವಾಗಿದ್ದು,  ಅರವಿಂದ್ ಬೆಲ್ಲದ್ ಬೆಂಬಲಿಗರು ಫೇಸ್ ಬುಕ್ ನಲ್ಲಿ ಮುಂದಿನ ಸಿಎಂ ಅರವಿಂದ ಬೆಲ್ಲದ್ ಎಂಬ ಪೋಸ್ಟ್ ಹಾಕುತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಂದಿ ಫೇಸ್ ಬುಕ್ ಖಾತೆಯಲ್ಲಿ ಅರವಿಂದ್ ಬೆಲ್ಲದ್ ಫೋಟೋ ಹಾಕಿ ಮುಂದಿನ ಸಿಎಂ ಎಂದು ಬೆಂಬಲಿಗರು ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕದ ವೀರಶೈವ ಲಿಂಗಾಯತ ಸಿಎಂ ಎಂದು ಬರೆದಿದ್ದಾರೆ.

Home add -Advt

ಅರವಿಂದ ಬೆಲ್ಲದ್ ದೆಹಲಿಗೆ ಹೋಗಿರುವುದನ್ನೇ ಕಾರಣವಾಗಿಸಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಆರಂಭವಾಗಿದ್ದು, ಜೂನ್ 16ರಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್  ರಾಜ್ಯಕ್ಕೆ ಭೇಟಿ ನೀಡಲಿದ್ದು, ಎಲ್ಲಾ ಗೊಂದಲಗಳಿಗೆ ತೆರೆ ಎಳೆದು, ಸಿಎಂ ಯಡಿಯೂರಪ್ಪ ವಿರೋಧಿ ಬಣಗಳ ಬಾಯಿ ಮುಚ್ಚಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಉರುಳಿಬಿದ್ದ ತೆಂಗಿನ ಮರ; ಬಾಲಕನ ದುರ್ಮರಣ

Related Articles

Back to top button