Latest

*ಗೂಡ್ಸ್ ವಾಹನ ಹರಿದು 5 ವರ್ಷದ ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ: ಗೂಡ್ಸ್ ವಾಹನ ಹರಿದು 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆ.ಜಿಹಳ್ಳಿಯಲ್ಲಿ ನಡೆದಿದೆ.

Home add -Advt

ತಾಹಿರ್ ಪಾಷಾ (5) ಮೃತ ಬಾಲಕ. ರಸ್ತೆಯಲ್ಲಿ ಓಡಿಬರುವಾಗ ಬಾಲಕನ ಕೈ ನಿಂತಿದ್ದ ಸ್ಕೂಟರ್ ಗೆ ತಾಗಿ ಬಾಲಕ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಂದ ಗೂಡ್ಸ್ ವಾಹನ ಬಾಲಕನ ಮೇಲೆಯೇ ಹರಿದು ಹೋಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಾಲಕನನ್ನು ಉಳಿಸಲು ಸಾಧ್ಯವಾಗಿಲ್ಲ. ಚಿಕಿತ್ಸೆ ಫಲಿಸದೇ ಬಾಲಕ ಕೊನೆಯುಸಿರೆಳೆದಿದ್ದಾನೆ.

ಕೆ.ಜಿ.ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Related Articles

Back to top button