Kannada NewsKarnataka News
ದೇವಸ್ಥಾನ ನಿರ್ಮಾಣಕ್ಕೆ 50 ಲಕ್ಷ ರೂ. ಮಂಜೂರು ಮಾಡಿಸಿ, ಭೂಮಿ ಪೂಜೆ ನೆರವೇರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೊನ್ನಿಹಾಳ ಗ್ರಾಮದ ಶ್ರೀ ವಿಠ್ಠಲ ಬೀರದೇವರ ನೂತನ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ 50 ಲಕ್ಷ ರೂ. ಮಂಜೂರು ಮಾಡಿಸಿದ್ದು, ಕಾಮಗಾರಿಗೆ ಶುಕ್ರವಾರ ಸಂಜೆ ಭೂಮಿ ಪೂಜೆ ನೆರವೇರಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನುಹೊನ್ನಿಹಾಳದ ಶ್ರೀ ವೈಷ್ಣವಿ ಮಾತಾ ನವ ದುರ್ಗೇಶ್ವರಿ ಬೇತಾಳ ಅಷ್ಟಲಕ್ಷ್ಮೀ ಮಠದ ಧರ್ಮಾಧಿಕಾರಿ ಶ್ರೀ ರೇವಣಸಿದ್ದಯ್ಯಾ ಶ್ರೀಶೈಲ ಮಠದ ವಹಿಸಿದ್ದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯಶವಂತ ಭ ಉಚಗಾಂವ್ಕರ, ರಮೇಶ ಕುಡಚಿ, ಭರಮಾ ಗಂ ಕಟಬುಗೋಳ, ಕಾಂಚನಾ ಸಿ ನಾಯಕ, ರಾವ್ ಸಾಹೇಬ್ ಪಾಟೀಲ, ದೇವಸ್ಥಾನದ ಟ್ರಸ್ಟ್ ಕಮೀಟಿಯವರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ