Latest

ಉಕ್ರೇನ್​ ರಾಕೆಟ್​ ದಾಳಿಗೆ 63 ರಷ್ಯಾ ಸೈನಿಕರು ಬಲಿ

ಪ್ರಗತಿವಾಹಿನಿ ಸುದ್ದಿ, ಮಾಸ್ಕೋ: ಉಕ್ರೇನ್​ ನಡೆಸಿದ ರಾಕೆಟ್ ದಾಳಿಗೆ ರಷ್ಯಾದ 63 ಸೈನಿಕರು ಬಲಿಯಾಗಿದ್ದಾರೆ.

ಡೊನೆಟ್ಸ್ಕ್‌ನ ಮಕಿವ್ಕಾ ಪ್ರದೇಶದಲ್ಲಿ ರಷ್ಯಾದ ಸಶಸ್ತ್ರ ಪಡೆಗಳ ಘಟಕವೊಂದನ್ನು ತಾತ್ಕಾಲಿಕ ನಿಯೋಜನೆ ಮಾಡುತ್ತಿದ್ದ ಸಂದರ್ಭದಲ್ಲಿ ಉಕ್ರೇನಿಯನ್ ಪಡೆಗಳು ಅಮೆರಿಕ ನಿರ್ಮಿತ ಹಿಮಾರ್ಸ್‌ನ 6 ರಾಕೆಟ್‌ಗಳಿಂದ ದಾಳಿ ನಡೆಸಿದವು.

ಈ ದಾಳಿಯಲ್ಲಿ ತಮ್ಮ 63 ಯೋಧರು ಪ್ರಾಣ ಕಳೆದುಕೊಂಡಿದ್ದು, 4 ರಾಕೆಟ್​ಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ರಕ್ಷಣಾ ಸಚಿವಾಲಯ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಸೈನಿಕರನ್ನೇ ಗುರಿಯಾಗಿಸಿಕೊಂಡ ಉಕ್ರೇನ್​ ಶಿಪಿಲೋವ್ಕಾ, ಲಿಮನ್, ಕ್ರೆಮೆನ್ನಾಯಾ, ಪ್ಲೋಶ್ಚಾಂಕಾ, ಚೆರ್ವೊನಾಯಾ ಡಿಬ್ರೊವಾ, ನಿಕೊಲಾಯೆವ್ಕಾ, ಸ್ಕೆಲ್ಕಿ ಪ್ರದೇಶಗಳ ಮೇಲೆ ನಿರಂತರ ರಾಕೆಟ್​ ದಾಳಿ ನಡೆಸಿದೆ. ಇದರಲ್ಲಿ ಡೊನೆಟ್ಸ್ಕ್​ ಪ್ರದೇಶದಲ್ಲಿ ಸೈನಿಕರು ಬಲಿಯಾಗಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

ಇದೇ ವೇಳೆ ಬೆರಿಸ್ಲಾವ್ ನಗರದಲ್ಲಿ ರಷ್ಯಾ ನಡೆಸಿದ ಶೆಲ್​ ದಾಳಿಯಲ್ಲಿ ಐದು ಉಕ್ರೇನಿಯನ್ನರು ಗಾಯಗೊಂಡಿದ್ದು ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಉಕ್ರೇನ್​ ಹೇಳಿಕೊಂಡಿದೆ.

ಇತ್ತೀಚೆಗಷ್ಟೇ ರಷ್ಯಾ ಉಕ್ರೇನ್ ನೊಂದಿಗಿನ ಯುದ್ಧದಿಂದ ಹಿಂದೆ ಸರಿಯಲು ಮನಸ್ಸು ಮಾಡಿದ್ದರೂ ಎರಡೂ ದೇಶಗಳ ಜಿದ್ದು, ಸ್ವಾಭಿಮಾನದ ತಾರಕ ಶಾಂತಿ ಸ್ಥಾಪನೆಗೆ ಅಡ್ಡಿಯಾಗಿದೆ.

ವಾಹನ ಚಲಾಯಿಸುವಾಗ ಮೊಬೈಲ್‌ ಬಳಕೆ; ಪ್ರಾಣ ತೆತ್ತವರೆಷ್ಟು ಗೊತ್ತೇ?

https://pragati.taskdun.com/use-of-mobile-while-driving-do-you-know-enough-to-take-your-life/

*ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಗೆಜೆಟ್ ಪ್ರಕಟ*

https://pragati.taskdun.com/zptaluk-panchayatgazettestate-govt/

ತಿರುಪತಿ ತಿಮ್ಮಪ್ಪನ ಹುಂಡಿಗೆ ಹರಿದು ಬಂತು ರಾಶಿ ರಾಶಿ ಹಣ

https://pragati.taskdun.com/more-than-thousend-cr-donation-collected-at-tirupati-timmappa-temple/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button