Latest

ದಲಿತ ಬಾಲಕಿಯನ್ನು ಅವಮಾನಿಸಿದ ಶಿಕ್ಷಕರು, ದೂರು ದಾಖಲು

ಪ್ರಗತಿವಾಹಿನಿ ಸುದ್ದಿ, ಹರಿಯಾಣ

ಹಿಸಾರ್ : ಹರಿಯಾಣದ ಹಿಸಾರಾದಲ್ಲಿರುವ ಖಾಸಗಿ ಶಾಲೆಯಲ್ಲಿ ದಲಿತ ಸಮುದಾಯದ ನಾಲ್ಕನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷಕರು ಅವಮಾನಿಸಿ ಮಾನಸಿಕ ಹಿಂಸೆ ನೀಡಿದ್ದಾರೆ. ಕಡಿಮೆ ಅಂಕಗಳನ್ನು ಪಡೆದಳು ಮತ್ತು ಹೋಮ್ ವರ್ಕ್ ಮಾಡಲಿಲ್ಲ ಎಂದು ದಲಿತ ವಿದ್ಯಾರ್ಥಿಯನ್ನು ಶಿಕ್ಷಕರು ಸಮುದಾಯದ ಬಗೆಗೆ ಅವಮಾನಿಸಿದ್ದಾರೆ ಎಂದು ಪೋಷಕರು ದೂರಿದ್ದಾರೆ.

Home add -Advt

ಘಟನೆಯ ಬಳಿಕ ಬಾಲಕಿ ಮನೆಗೆ ಬಂದು ತಂದೆಗೆ ವಿಷಯ ತಿಳಿಸಿದ್ದಾಳೆ. ಅವರು ತಮ್ಮ ವರ್ಗದ ಸಮುದಾಯಕ್ಕೆ ವಿಷಯ ತಿಳಿಸಿದ್ದಾರೆ. ಸತತ ವಾರ ಪೂರ್ತಿ ದಲಿತ ಹುಡುಗಿಯನ್ನು ಅವಮಾನಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು  ಶಾಲೆಯ ಸಿಸಿಟಿವಿಯ ತುಣುಕನ್ನು ಪರಿಶೀಲಿಸಿದ್ದಾರೆ. ಸದ್ಯ ಈ ಬಗ್ಗೆ ಬಾಲಕಿ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.

Related Articles

Back to top button