Latest

ಮದುವೆಗೆ ಕರೆಯದ ಅಮ್ಮ; ಆತ್ಮಹತ್ಯೆಗೆ ಶರಣಾದ 8 ವರ್ಷದ ಬಾಲಕಿ

ಪ್ರಗತಿವಾಹಿನಿ ಸುದ್ದಿ; ಲಕ್ನೋ: ಸಂಬಂಧಿಕರ ಮದುವೆಗೆ ಅಮ್ಮ ತನ್ನನ್ನು ಬಿಟ್ಟು ಹೋದಳು ಎಂದು ಕೋಪಗೊಂಡ 8 ವರ್ಷದ ಬಾಲಕಿ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.

ತಾಯಿಯೊಬ್ಬಳು ತನ್ನ 8 ವರ್ಷದ ಮಗಳನ್ನು ಮನೆಯಲ್ಲಿ ಬಿಟ್ಟು ಸಂಬಂಧಿಯೊಬ್ಬರ ಮದುವೆಗೆಂದು ಪುಟ್ಟ ಮಗನನ್ನು ಕರೆದುಕೊಂಡು ತಮ್ಮನ ಜೊತೆ ಹೋಗಿದ್ದಾಳೆ. ಹಠ ಮಾಡಿದರೂ ಅಮ್ಮ ಕರೆದುಕೊಂಡು ಹೋಗಿಲ್ಲ. ಮದುವೆ ಮುಗಿಸಿ ಮನೆಗೆ ವಾಪಸ್ ಆದ ತಾಯಿ ಬಾಗಿಲು ಬಡಿದರೂ ಬಾಲಕಿ ಬಾಗಿಲು ತೆರೆದಿಲ್ಲ. ಬಾಗಿಲು ಒಡೆದು ಒಳ ಬಂದು ನೋಡಿದಾಗ ಮಗಳು ನೇಣಿಗೆ ಶರಣಾಗಿದ್ದಾಳೆ.

ಅಮ್ಮ ತನ್ನೊಬ್ಬಳನ್ನೇ ಬಿಟ್ಟು ಹೋದಳೆಂದು ನೊಂದು ಮಗು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಆದರೆ ಪೊಲೀಸರು ಘಟನಾ ಸ್ಥಳಕ್ಕೆ ಹೋಗುವ ಮೊದಲೆ ಬಾಲಕಿಯ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.

Related Articles

Back to top button