Cancer Hospital 2
Beereshwara 36
LaxmiTai 5

*ಜುಲೈ 5 ರಂದು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 8,500 ಹಣ ವರ್ಗಾವಣೆ: ರಾಹುಲ್ ಗಾಂಧಿ ಘೋಷಣೆ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜುಲೈ 5 ರಂದು ದೇಶದ ಕೋಟ್ಯಂತರ ಬಡ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 8,500 ರೂ. ಜಮಾ ಮಾಡಲಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಘೋಷಣೆ ಮಾಡಿದ್ದಾರೆ. 

ಹಿಮಾಚಲ ಪ್ರದೇಶದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ 20-25 ಕೋಟ್ಯಧಿಪತಿಗಳಿಗೆ ಕೋಟ್ಯಂತರ ರೂ. ಹಣವನ್ನು ನೀಡಿದೆ. ಶ್ರೀಮಂತರನ್ನು ಮಾತ್ರವೇ ಅವರು ಬೆಳೆಸಿದ್ದಾರೆ. ನರೇಂದ್ರ ಮೋದಿ ಇರೋವರೆಗೂ ಅದಾನಿ ಅವರ ವ್ಯವಹಾರ ಆಕಾಶಕ್ಕೆ ಏರುತ್ತದೆ ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ಮುಂದೆ ನಮಗೂ ಕಾಲ ಬಂದಾಗ ನಾವು ಕೂಡಾ ಕೋಟ್ಯಂತರ ಜನರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುತ್ತೇವೆ ಎಂದು ಹೇಳಿದರು.

Emergency Service

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ದೇಶದಲ್ಲಿರುವ ಎಲ್ಲಾ ಬಡವರ ಪಟ್ಟಿಯನ್ನು ತಯಾರಿಸಲಾಗುತ್ತದೆ. ಅದರಲ್ಲಿ ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಯ ಹೆಸರನ್ನು ಆಯ್ಕೆ ಮಾಡಾಗುತ್ತದೆ. ಜುಲೈ 5 ರಂದು ಆ ಕೋಟ್ಯಂತರ ಮಹಿಳೆಯರ ಖಾತೆಗೆ 8,500 ರೂ. ಜಮೆಯಾಗುತ್ತದೆ. ಇದು ಜುಲೈನಿಂದ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ಹೀಗೆ ಪ್ರತಿ ತಿಂಗಳು ಠಕಾ ಠಕ್‌, ಠಕಾ ಠಕ್‌ ಎಂದು ಮುಂದುವರಿಯುತ್ತದೆ ಎಂದರು.

Bottom Add3
Bottom Ad 2