National

*ಇಂಡಿಗೋ ಸಂಸ್ಥೆಗೆ 944.20 ಕೋಟಿ ದಂಡ ವಿಧಿಸಿದ ಐಟಿ ಇಲಾಖೆ*

ಪ್ರಗತಿವಾಹಿನಿ ಸುದ್ದಿ: ಇಂಡಿಗೋಗೆ ವಿಮಾನಯಾನ ಸಂಸ್ಥೆಗೆ ಆದಾಯ ತೆರಿಗೆ ಇಲಾಖೆ ಬಿಗ್ ಶಾಕ್ ನೀಡಿದ್ದು, 944.20 ಕೋಟಿ ದಂಡ ವಿಧಿಸಿದೆ. 

2021-22 ಸಾಲಿಗೆ ಅನ್ವಯವಾಗುವಂತೆ ಐಟಿ ಇಲಾಖೆ ದಂಡ ವಿಧಿಸಿದೆ. ಸೆಕ್ಷನ್ 143 (3) ಪ್ರಕಾರ ಆದಾಯ ತೆರಿಗೆ ಕಮಿಷನರ್ ಮುಂದೆ ಕಂಪನಿಯು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂಬ ತಪ್ಪು ತಿಳುವಳಿಕೆ ಈ ಆದೇಶಕ್ಕೆ ಕಾರಣ ಎಂದು ಕಂಪನಿ ವಾದಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೋ ಸಂಸ್ಥೆ ಆದಾಯ ತೆರಿಗೆ ಇಲಾಖೆಯ ಈ ಆದೇಶ ಕಾನೂನಿಗೆ ವಿರುದ್ಧವಾಗಿದೆ ಮತ್ತು ತಪ್ಪು ತಿಳುವಳಿಕೆಯಿಂದ ಕೂಡಿದೆ ಎಂದು ವಾದಿಸಿದ್ದು ಈ ಬಗ್ಗೆ ಕಾನೂನು ಹೋರಾಟ ಮುಂದುವರೆಸುವುದಾಗಿ ಹೇಳಿದೆ.

ಇನ್ನು ಈ ಬೃಹತ್ ಮೊತ್ತದ ದಂಡದ ಆದೇಶ ಸಂಸ್ಥೆಯ ಹಣಕಾಸು ಪರಿಸ್ಥಿತಿ, ವಿಮಾನಗಳ ಕಾರ್ಯಾಚರಣೆ ಮತ್ತು ಇತರ ಚಟುವಟಿಕೆಗಳ ಮೇಲೆ ಯಾವುದೇ ರೀತಿಯ ಮಹತ್ವದ ಪರಿಣಾಮ ಬೀರುವುದಿಲ್ಲ ಎಂದು ಇಂಡಿಗೋ ಸಂಸ್ಥೆ ಹೇಳಿಕೊಂಡಿದೆ.

Home add -Advt

Related Articles

Back to top button