Latest

ಮತ್ತೋರ್ವ ಸ್ವಾಮೀಜಿ ವಿರುದ್ಧ ಅಕ್ರಮ ಸಂಬಂಧ ಆರೋಪ; ಪತ್ನಿ ವಿರುದ್ಧ ಪತಿಯಿಂದಲೇ ದೂರು

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ರಾಜ್ಯದಲ್ಲಿ ಮತ್ತೊರ್ವ ಸ್ವಾಮೀಜಿ ವಿರುದ್ಧ ಅಕ್ರಮ ಸಂಬಂಧ ಆರೋಪ ಕೇಳಿಬಂದಿದ್ದು, ಪತ್ನಿ ವಿರುದ್ಧವೇ ಪತಿ ಮಹಾಶಯನೊಬ್ಬ ಸ್ವಾಮೀಜಿ ಜೊತೆ ಸಂಬಂಧವಿರುವುದಾಗಿ ಆರೋಪಿಸಿದ್ದಾನೆ

ದಾವಣಗೆರೆ ಜಿಲ್ಲೆಯ  ಸ್ವಾಮೀಜಿ ಒಬ್ಬರ ವಿರುದ್ಧ ಚಂದ್ರಶೇಖರ್ ಎಂಬುವವರು ಆರೋಪ ಮಾಡಿದ್ದು, ತನ್ನ ಪತ್ನಿಯನ್ನು  ಸ್ವಾಮೀಜಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

Home add -Advt

ಮೂರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಪತ್ನಿ ನಾಲ್ಕು ವರ್ಷಗಳ ಕಾಲ ನನ್ನೊಂದಿಗೆ ಚೆನ್ನಾಗಿಯೇ ಇದ್ದಳು. ನಾವು ಶಿವಮೊಗ್ಗದಲ್ಲಿ ವಾಸವಾಗಿದ್ದೆವು. ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತ್ನಿ ಆಗಾಗ ದಾವಣಗೆರೆ ಜಿಲ್ಲೆಯಲ್ಲಿರುವ ಮಠಕ್ಕೆ ಹೋಗುತ್ತಿದ್ದಳು. ಬಳಿಕ ಆಕೆಯ ಮನೆಯವರು, ಮಠದ ಸ್ವಾಮೀಜಿ ದಾವಣಗೆರೆಗೆ ಶಿಫ್ಟ್ ಆಗುವಂತೆ ಹೇಳಿದ್ದರು. ಹಾಗಾಗಿ ದಾವಣಗೆರೆಗೆ ಶಿಫ್ಟ್ ಆಗಿದ್ದೆವು. ಆಗಾಗ ಮಠಕ್ಕೆ ಹೋಗುತ್ತಿದ್ದ ಪತ್ನಿ 15 ದಿನಕ್ಕೊಮ್ಮೆ ಹೋಗಲು ಶುರುಮಾಡಿದ್ದಳು.

ಸ್ವಾಮೀಜಿ ಒತ್ತಾಯಕ್ಕೆ ನನ್ನ ಹೆಂಡತಿ , ಮಠದಲ್ಲಿ ಕೆಲಸ ಮಾಡುತ್ತಿದ್ದಳು. ಇನ್ನೊಂದು ಮಠ  ಮಠದಲ್ಲಿ ನನ್ನನ್ನು ಸೇವೆ ಮಾಡಲು ನೇಮಿಸಿದ್ದರು. ಪೂಜೆ ಮಾಡಲು ಮಂತ್ರಗಳನ್ನು ಕಲಿತುಕೊಂಡೆ. ಕೆಲ ವರ್ಷ ಎಲ್ಲವೂ ಚೆನ್ನಾಗಿಯೇ ಸಾಗಿತ್ತು. ಆದರೆ ಒಂದು ದಿನ ಮಠದಲ್ಲಿ ರೇಣುಕಾ ಜಯಂತಿ ನಡೆದಿತ್ತು. ಆಗ ಸ್ವಾಮೀಜಿ ನಿಜಬಣ್ಣ ಬಯಲಾಗಿದೆ. ಸ್ವಾಮೀಜಿ ಹಾಗೂ ನನ್ನ ಪತ್ನಿ ಜೊತೆ ಇರುವುದನ್ನು ನೋಡಿದ್ದೇನೆ. ಈ ಬಗ್ಗೆ ಪ್ರಶ್ನಿಸಿದಾಗ ಸ್ವಾಮೀಜಿ ಉಡಾಫೆ ಮಾತನಾಡುತ್ತಿದ್ದಾರೆ. ಮಠದ ಕೆಲಸ ಬಿಟ್ಟು ಬಂದ ನಾನು, ಪತ್ನಿಗೂ ಮಠವನ್ನು, ಸ್ವಾಮೀಜಿ ಸಹವಾಸವನ್ನು ಬಿಡುವಂತೆ ಹೇಳಿದ್ದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.

ಅಲ್ಲದೇ ಸ್ವಾಮೀಜಿಗೂ ತನ್ನ ಪತ್ನಿಯನ್ನು ಬಿಡುವಂತೆ ಕೇಳಿಕೊಂಡಿದ್ದೇನೆ. ಒಂದುವರೆ ವರ್ಷ ನನ್ನ ಹೆಂಡತಿಯನ್ನು ಬಳಸಿಕೊಂಡಿದ್ದೀರಿ, ವಿಡಿಯೋ ನನ್ನ ಬಳಿ ಇದೆ. ಕೆಟ್ಟದ್ದು ಆಗಬಾರದು ಎಂದರೆ ನನ್ನ ಪತ್ನಿಯನ್ನುಬಿಟ್ಟು ಬಿಡಿ ಎಂದು ಚಂದ್ರಶೇಖರ್ ಹಾಗೂ ಸ್ವಾಮೀಜಿ ಮಾತನಾಡಿರುವ ಆಡಿಯೋ ಕೂಡ ವೈರಲ್ ಆಗಿದೆ.

ಆದರೆ ಪತಿ ಆರೋಪವನ್ನು ತಳ್ಳಿ ಹಾಕಿರುವ ಚಂದ್ರಶೇಖರ್ ಪತ್ನಿ, ತನ್ನ ಪತಿ ಓರ್ವ ಕುಡುಕ, ಡ್ರಗ್ಸ್ ಅಡಿಕ್ಟ್, ಪ್ರತಿದಿನ ಹೊಡೆದು ಹಿಂಸೆ ಕೊಡುತ್ತಿದ್ದ. ಆತನಿಗೆ ದುಡ್ದಿನ ಆಸೆ. ಆತನ ಕೆಟ್ಟ ಚಟಗಳನ್ನು ಬಿಡಿಸಲೆಂದು ಮಠಕ್ಕೆ ಕರೆದುಕೊಂಡು ಹೋಗಿ ಲಿಂಗದೀಕ್ಷೆ ಕೊಡಿಸಿದ್ದೆ. ಕೆಲ ಸಮಯ ಸರಿ ಹೋಗಿದ್ದವ ಮತ್ತೆ ಚಟಗಳನ್ನು ಮುಂದುವರೆಸಿದ್ದಾನೆ. ಈಗ ನನ್ನ ಹಾಗೂ ಸ್ವಾಮೀಜಿ ವಿರುದ್ಧವೇ ಆರೋಪ ಮಾಡುತ್ತಿದ್ದಾನೆ ಎಂದು ಪತಿಯ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ.

ಜನಸ್ಪಂದನಾ ಸಮಾವೇಶ; ವೇದಿಕೆಯ ಮೇಲೆ ಸಚಿವರಾದ MTB, ಮುನಿರತ್ನ, ಶಾಸಕ ಎಸ್.ಆರ್ ವಿಶ್ವನಾಥ ಭರ್ಜರಿ ಡ್ಯಾನ್ಸ್

https://pragati.taskdun.com/politics/bjp-janaspandana-samaveshabjp-ledesdancedoddaballapura/

Related Articles

Back to top button