Latest

ಸ್ನಾನಗೃಹದಲ್ಲಿ ವಿದ್ಯಾರ್ಥಿನಿ ವಿಡಿಯೊ ಮಾಡಿದ ಹಾಸ್ಟೆಲ್ ಸಿಬ್ಬಂದಿ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ, ಮುಂಬೈ: ಇಲ್ಲಿನ ಐಐಟಿ ಹಾಸ್ಟೆಲ್ ಸ್ನಾನಗೃಹದಲ್ಲಿ  ವಿದ್ಯಾರ್ಥಿನಿಯೊಬ್ಬಳ ವಿಡಿಯೊ ಚಿತ್ರೀಕರಿಸಿದ ಹಾಸ್ಟೆಲ್ ಕ್ಯಾಂಟೀನ್ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ. 

ಪಿಂಟು ಗರಿಯಾ (22) ಎಂಬಾತ ಬಂಧಿತ ನೌಕರ. ಆರೋಪಿಯ ಮೊಬೈಲ್ ಫೋನ್ ಸ್ನಾನಗೃಹದ ಕಿಟಕಿ ಬಳಿ ಸುಳಿದಾಡುತ್ತಿದ್ದುದನ್ನು ಗಮನಿಸಿದ ವಿದ್ಯಾರ್ಥಿನಿ, ಈ ಕುರಿತು ಹಾಸ್ಟೆಲ್ ಕೌನ್ಸಿಲ್ ಮತ್ತು ಅಧಿಕಾರಿಗಳ ಬಳಿ ದೂರಿದ್ದಾರೆ. ಸ್ನಾನಗೃಹದಲ್ಲಿ ಇಣುಕಿ ನೋಡಿ ಚಿತ್ರೀಕರಿಸಲು ಪೈಪ್ ಒಂದರ ಮೇಲೆ ಆರೋಪಿ ನೌಕರ ಹತ್ತಿದ್ದಾಗಿಯೂ ವಿದ್ಯಾರ್ಥಿನಿ ದೂರಿದ್ದಾಳೆ.

ನಂತರ ಪೋವೈ ಪೊಲೀಸ್ ಠಾಣೆಗೆ ತೆರಳಿ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾಳೆ. ಘಟನೆ ವೇಳೆಗೆ ಆರೋಪಿ ಮೊಬೈಲ್ ನಲ್ಲಿ ಕತ್ತಲಲ್ಲಿ ಮಾಡಿದ 3 ಸೆಕೆಂಡ್ ಗಳ ವಿಡಿಯೊ ಕ್ಲಿಪ್ ವಶಪಡಿಸಿಕೊಂಡಿದ್ದು ಈತ ವಿದ್ಯಾರ್ಥಿನಿ ವಿಡಿಯೊ ಚಿತ್ರೀಕರಿಸಲು ಮುಂದಾಗಿರುವ ಸುಳಿವುಗಳು ದೊರೆತಿವೆ ಎಂದು ಪೊಲೀಸ್ ಅಧಿಕಾರಿ ಡಿಸಿಪಿ ಮಹೇಶ್ವರ ರೆಡ್ಡಿ ತಿಳಿಸಿದ್ದಾರೆ.

ಇದೇ ವೇಳೆ ಆರೋಪಿಯ ಚಲನವಲನಗಳನ್ನು ಗುರುತಿಸುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿರುವ ಸಿಸಿಟಿವಿ ಕ್ಲಿಪ್ ಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿಸರ್ಗ ಮನೆಯಲ್ಲಿ ಚಿತ್ರನಟ ಟೆನ್ನಿಸ್ ಕೃಷ್ಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button