Latest

ಎಲ್ ಇಡಿ ಟಿವಿ ಸ್ಪೋಟ ; 16 ರ ಬಾಲಕ ಸಾವು

ಪ್ರಗತಿವಾಹಿನಿ ಸುದ್ದಿ; ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಎಲ್ ಇಡಿ ಟಿವಿ ಸ್ಪೋಟಗೊಂಡು 16 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ತಾಯಿ, ಅತ್ತಿಗೆ ಮತ್ತು ಓರ್ವ ಗೆಳೆಯ ತೀವ್ರವಾಗಿ ಗಾಯಗೊಂಡಿದ್ದಾರೆ.
ಕುಟುಂಬದವರೆಲ್ಲ ಕುಳಿತು ಟಿವಿ ನೋಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಮನೆಯ ಒಂದು ಗೋಡೆಗೆಯ ಭಾಗ ಕುಸಿದು ಬಿದ್ದಿದೆ.

ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡಿರಬಹುದು ಎಂದು ನೆರೆಮನೆಯವರು ಭಾವಿಸಿದ್ದರು. ಬಂದು ನೋಡಿದಾಗ ಟಿವಿ ಸ್ಪೋಟಗೊಂಡಿರುವುದು ಕಂಡು ಬಂದಿದೆ. ಅಗ್ನಿ ಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Home add -Advt

ಶ್ರೀಲೀಲಾ ತಾಯಿ ಸ್ವರಣಲತಾ ವಿರುದ್ಧ ಮತ್ತೊಂದು FIR

https://pragati.taskdun.com/latest/shreeleelamotherswarnalatafir-file/

Related Articles

Back to top button