Kannada NewsKarnataka NewsLatest

ಬೆಳಗಾವಿ: ಇಬ್ಬರು ಯುವಕರ ಭೀಕರ ಕೊಲೆ; ಸ್ಥಳಕ್ಕೆ ಧಾವಿಸಿದ ಪೊಲೀಸರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಹಳೆಯ ದ್ವೇಷ ಹಿನ್ನೆಲೆಯಲ್ಲಿ ತಾಲೂಕಿನ ಸುಳೇಭಾವಿ ಗ್ರಾಮದದಲ್ಲಿ ಇಬ್ಬರು ಯುವಕರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಸುಳೇಭಾವಿ ಗ್ರಾಮದ ಪ್ರಕಾಶ ನಿಂಗಪ್ಪ ಹುಂಕರಿ ಪಾಟೀಲ(24) ಮತ್ತು ರಣಧೀರ ಮಹೇಶ ಅಲಿಯಾಸ್ ರಾಮಚಂದ್ರ ಮುರಾರಿ(26) ಹತ್ಯೆಯಾದವರು. ಗುರುವಾರ ರಾತ್ರಿ ಕೊಲೆ ನಡೆದಿದೆ.

Home add -Advt

ಶಿವಾಜಿ‌ಮಹಾರಾಜರ ಪ್ರತಿಮೆ ಎದುರು ಕೊಲೆ ಮಾಡಲಾಗಿದ್ದು, ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.  ಮಾರೀಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಮಾರಿಹಾಳ ಇನ್ಸ್ಪೆಕ್ಟರ್ ಬಸ್ಸಾಪೂರೆ  ಸೇರಿ  ಪೊಲೀಸರು ಧಾವಿಸಿದ್ದಾರೆ.

ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ತಿಪಂಜರ, ಬುರುಡೆ ಪತ್ತೆ : ಹೆಸ್ಕಾಂ ವಿರುದ್ಧ ಕೊಲೆ ಪ್ರಕರಣ ದಾಖಲು

https://pragati.taskdun.com/latest/a-case-of-murder-has-been-registered-against-hescom/

 

Related Articles

Back to top button