ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಜಗತ್ತಿನ ಅತ್ಯಂತ ಹಿರಿಯ ನಾಯಿ ಪೆಬಲ್ಸ್ ವಯೋಸಹಜವಾಗಿ ಮೃತಪಟ್ಟಿದೆ.
ತನ್ನ ಮಾಲೀಕರಾದ ಬಾಬಿ ಮತ್ತು ಜೂಲಿ ಗ್ರೆಗೊರಿಯೊಂದಿಗೆ ಯುಎಸ್ ಸೌತ್ ಕೆರೊಲಿನಾದ ಟೇಲರ್ಸ್‌ನಲ್ಲಿರುವ ಮನೆಯಲ್ಲಿದ್ದು ಅಲ್ಲೇ ಸಾವು ಕಂಡಿದೆ.
ಟಾಯ್ ಫಾಕ್ಸ್ ಟೆರಿಯರ್ ಜಾತಿಯ ಈ ಶ್ವಾನ 2000ನೇ ಇಸ್ವಿಯ ಮಾರ್ಚ್ 28 ರಂದು ನ್ಯೂಯಾರ್ಕ್ ನ ಲಾಂಗ್ ಐಲ್ಯಾಂಡ್ ನಲ್ಲಿ ಜನಿಸಿತ್ತು. ಪೆಬಲ್ಸ್ ತನ್ನ ಸಂಗಾತಿ ರಾಕಿಯೊಂದಿಗೆ ಈವರೆಗೆ 32 ಮರಿಗಳಿಗೆ ಜನ್ಮ ನೀಡಿತ್ತು. ಆದರೆ ರಾಕಿ 2017 ರಲ್ಲೇ ತನ್ನ 16 ವಯಸ್ಸಿಗೆ ಮೃತಪಟ್ಟಿತ್ತು.
22 ವಸಂತಗಳನ್ನು ಕಂಡ ಪೆಬಲ್ಸ್ ಇನ್ನೈದು ತಿಂಗಳಲ್ಲಿ 23ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿತ್ತು.
ಎಮ್ಮೆಗಳ ಹಿಂಡಿಗೆ ಡಿಕ್ಕಿ; ವಂದೇ ಮಾತರಂ ಎಕ್ಸ್ ಪ್ರೆಸ್ ರೈಲಿನ ಎಂಜಿನ್ ಜಖಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ