Latest

ಷೇರುಪೇಟೆಯಲ್ಲಿ ಗೊಂದಲ- ರಿಯಲ್ ಟೈಂ ನಿರ್ಧಾರ ಒಂದೇ ಪರಿಹಾರ

ಕೆ ಜಿ ಕೃಪಾಲ್, ಆರ್ಥಿಕ ಅಂಕಣಕಾರರು, ಬೆಂಗಳೂರು
*  ಭಾರತೀಯ ರಿಸರ್ವ್ ಬ್ಯಾಂಕ್ ರೆಪೊದರ ಮತ್ತು ರೆಪೊದರಗಳಲ್ಲಿ ಸ್ಥಿರತೆ ಕಾಪಾಡಿಕೊಂಡಿದೆ.  ಬ್ಯಾಂಕ್ ಗಳ ಎಸ್ ಎಲ್ ಆರ್ ನ್ನು 25 ಬೇಸಿಸ್ ಪಾಯಿಂಟುಗಳಷ್ಟು ಕಡಿಮೆಗೊಳಿಸಿದೆ. ಇದನ್ನು ಈಗಿನ ಶೇ.19.50% ರಿಂದ ಪ್ರತಿ ತ್ರೈಮಾಸಿಕದಲ್ಲಿ 25 ಬೇಸಿಸ್ ಪಾಯಿಂಟುಗಳನ್ನು ಕಡಿತಗೊಳಿಸಿ ಶೇ.18% ರವರೆಗೂ ಇಳಿಸುವ ಗುರಿ ಹೊಂದಿದೆ.
*  ಕ್ರಿಸಿಲ್ ರೇಟಿಂಗ್ ಕಂಪನಿಯು ಭಾರತದ ಬೆಳವಣಿಗೆಯನ್ನು ಶೇ.7.4% ಕ್ಕೆ ಕಡಿತಗೊಳಿಸಿದೆ.
*  ನವೆಂಬರ್ ತಿಂಗಳಲ್ಲಿ ಉತ್ಪಾದನಾ ವಲಯವು ಹನ್ನೊಂದು ತಿಂಗಳ ಗರಿಷ್ಟ ಹಂತ ತಲುಪಿದೆ.
*  ಬಿ ಹೆಚ್ ಇ ಎಲ್ ಕಂಪನಿ   ಪ್ರತಿ ಷೇರಿಗೆ ರೂ.86 ರಂತೆ  ಷೇರು ಹಿಂಕೊಳ್ಳುವಿಕೆಯು ಈ ತಿಂಗಳ13 ರಿಂದ ಆರಂಭಗೊಳ್ಳಲಿದೆ.
*  ಅಶೋಕ್ ಲೆಲ್ಯಾನ್ಡ್,  ಭಾರತ್ ಫೋರ್ಜ್ ,  ಜಿಂದಾಲ್ ಸ್ಟಿಲ್ ಅಂಡ್ ಪವರ್, ಏನ್ ಎಂ ಡಿ ಸಿ, ಸನ್ ಫಾರ್ಮ, ರಿಲಯನ್ಸ್ ಕ್ಯಾಪಿಟಲ್, ಕ್ವೆಸ್ ಕಾರ್ಪ್, ಟಾಟಾ ಗ್ಲೋಬಲ್, ಗಳು ವಾರ್ಷಿಕ ಕನಿಷ್ಟಕ್ಕೆ ಕುಸಿದಿವೆ.
*  ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಲಾಭ ಗಳಿಕೆ ಹಿಂದಿನ ತ್ರೈಮಾಸಿಕಕ್ಕೂ ಹೆಚ್ಚಿದೆಯಾದರು ಲಾಭಾಂಶ ಘೋಷಣೆಯಿಲ್ಲ.
*  ನೆಸ್ಲೆ ಇಂಡಿಯಾ ಪ್ರತಿ ಷೇರಿಗೆ ರೂ.50.ರಂತೆ ಲಾಭಾಂಶ ಪ್ರಕಟಿಸಿದೆ.
*  ಟಾಟಾ ಸ್ಟಿಲ್ ಕಂಪನಿ ಉಷಾ ಮಾರ್ಟಿನ್ ಕಂಪನಿಯ ಸ್ಟಿಲ್ ಅಂಡ್ ರೋಪ್ ವ್ಯವಹಾರವನ್ನು ರೂ.4,300 – 4,700 ಕೋಟಿಗೆ ಖರೀದಿ ಮಾಡಿದ್ದರು ಷೇರುದಾರರಿಗೆ ಯಾವ ರೀತಿ ಅನುಕೂಲಕರವಾಗುವುದೋ ಕಾದುನೋಡಬೇಕು.  
*  ಹೆಚ್ ಡಿ ಎಫ್ ಸಿ ಎ ಎಂ ಸಿ ಮತ್ತು ಹೆಚ್ ಡಿ ಎಫ್ ಸಿ ಟ್ರಸ್ಟಿ ಕಂಪನಿಗಳು ಮ್ಯುಚ್ಯುಯಲ್ ಫಂಡ್ ನಿಯಮ ಉಲ್ಲಂಘನೆಯನ್ನು ರೂ.3.78 ಕೋಟಿ ನೀಡಿ ‘ಸೆಬಿ’ ಯೊಂದಿಗೆ ಸೆಟ್ಟಲ್ ಮಾಡಿಕೊಂಡಿದೆ. 
* ಐಸಿಐಸಿಐ ಪ್ರುಡೆನ್ಷಿಯಲ್ ಎ ಎಂ ಸಿ ಮತ್ತು ಅದರ ಮುಖ್ಯಸ್ಥರು ಕ್ರಮವಾಗಿ ರೂ.89.96 ಲಕ್ಷ ಮತ್ತು ರೂ.6.8 ಲಕ್ಷ ರೂಪಾಯಿಗಳ ದಂಡ ತೆರುವ ಮೂಲಕ  ಐಸಿಐಸಿಐ ಸೆಕ್ಯುರಿಟೀಸ್ ಕಂಪನಿ ಐಪಿಒ  ವಿಷಯದಲ್ಲಿನ ಲೋಪವನ್ನು  ‘ ಸೆಬಿ’ಯೊಂದಿಗೆ ಸೆಟ್ಟಲ್ಮೆಂಟ್ ಮಾಡಿಕೊಂಡಿದೆ.
* ಬುಧವಾರ ಸೆನ್ಸೆಕ್ಸ್ ಕಂಡ 249 ಪಾಯಿಂಟುಗಳ ಕುಸಿತದ ಕಾರಣ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.143.52 ಲಕ್ಷ ಕೋಟಿಯಿಂದ ರೂ.142.15 ಲಕ್ಷ ಕೋಟಿಗೆ ಕುಸಿದಿದೆ.
ಷೇರುಪೇಟೆಯಲ್ಲಿ ಗೊಂದಲಮಯ ವಾತಾವರಣವಿದ್ಧು real-time ನಿರ್ಧಾರ ಒಂದೇ ಪರಿಹಾರ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button